Everyday Cooking Recipes – Karnataka’ Food

ಬೇಕಾಗುವ ಸಾಮಾಗ್ರಿಗಳು:
ಬದನೆಕಾಯಿ 5
ಈರುಳ್ಳಿ 1
ಟೊಮೋಟ 2
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 6 ಎಸಳು
ಚಕ್ಕೆ 1
ಪಲಾವ್ ಎಲೆ
ಮೊಗ್ಗು 2
ಲವಂಗ 3
ತೆಂಗಿನತುರಿ ಸ್ವಲ್ಪ
ಚಿಲ್ಲಿ ಪುಡಿ 1 ಚಮಚ
ಕೊತ್ತಂಬರಿ ಪುಡಿ 1 ಚಮಚ
ಗರಂ ಮಸಾಲ 1 ಚಮಚ
ಎಣ್ಣೆ
ಸಾಸಿವೆ
ಕಡಲೆಬೇಳೆ 2 ಚಮಚ
ಉಪ್ಪು

ಮಾಡುವ ವಿಧಾನ:
1. ಬದನೆಕಾಯಿಯನ್ನು ತೊಟ್ಟು ತೆಗೆಯದ ರೀತಿ ಕತ್ತರಿಸಿ, ಈರುಳ್ಳಿಯನ್ನು ಕತ್ತರಿಸಿ.
2. ತೆಂಗಿನತುರಿ, ಟೊಮೋಟ, ಶುಂಠಿ, ಬೆಳ್ಳುಳ್ಳಿಯನ್ನು ರುಬ್ಬಿರಿ.
3. ಕುಕ್ಕರ್‌ನಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಚಕ್ಕೆ,ಲವಂಗ, ಮೊಗ್ಗು, ಪಲಾವ್ ಎಲೆ, ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ, ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಬಾಡಿಸಿ ಅದಕ್ಕೆ ಬದನೆಕಾಯಿ ಹಾಕಿ ಚಿಲ್ಲಿ ಪುಡಿ, ಕೊಟ್ತಂಬರಿಪುಡಿ, ಗರಂ ಮಸಾಲ ಹಾಕಿ ಬಾಡಿಸಿ ನೀರು,ಉಪ್ಪು ಸೇರಿಸಿ ಕುದಿ ಬಂದ ನಂತರ ಮುಚ್ಚಳ ಮುಚ್ಚಿ 3 ವಿಸಲ್ ಕೂಗಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ಬದನೆಕಾಯಿ ಹೆಣಕಾಯಿ ರೆಡಿ.

Tomato Sambar
Tomato Sambar

ಬೇಕಾಗುವ ಸಾಮಾಗ್ರಿಗಳು:
ಟಮೋಟ 4
ಈರುಳ್ಳಿ 1
ತೆಂಗಿನಕಾಯಿ ತುರಿ ಸ್ವಲ್ಫ
ಸಾಂಬಾರ್ ಪುಡಿ 2 ಚಮಚ
ಉರಿಗಡಲೆ ಸ್ವಲ್ಫ

ಕಡಲೆ ಬೆಳೆ 2 ಚಮಚ
ಕರಿಬೇವಿನ ಎಲೆ 6-8
ಕೊತ್ತಂಬರಿ ಸೊಪ್ಪು ಸ್ವಲ್ಫ
ಒಣಮೆಣಸಿನಕಾಯಿ 2
ಉಪ್ಪು ರುಚಿಗೆ
ಎಣ್ಣೆ 3 ಚಮಚ
ಸಾಸಿವೆ 1/4 ಚಮಚ
ಜೀರಿಗೆ 1/4 ಚಮಚ
ಮಾಡುವ ವಿಧಾನ:
1. ಈರುಳ್ಳಿ & ಟಮೋಟವನ್ನು ಹಚ್ಚಿಕೊಳ್ಳಿ.
2.ತೆಂಗಿನತುರಿ &ಉರಿಗಡಲೆಯನ್ನು ಸ್ವಲ್ಫ ನೀರು ಸೇರಿಸಿ ರುಬ್ಬಿಕೊಳ್ಳಿ.
3. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ ಸಾಸಿವೆ, ಜೀರಿಗೆ, ಕಡಲೆಬೇಳೆ ಹಾಕಿ ಬಾಡಿಸಿ ನಂತರ ಹಚ್ಚಿದ ಈರುಳ್ಳಿ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಕಂದು ಬಣ್ಣ ಬರುವವರೆಗೆ ಬಾಡಿಸಿ. ಆಮೇಲೆ ಅದಕ್ಕೆ ಹಚ್ಚಿದ ಟಮೋಟ ಹಾಕಿ ಬಾಡಿಸಿ ನೀರು ಸೇರಿಸಿ ಆದ ಮೇಲೆ ಸಾಂಬಾರ್ ಪುಡಿ ಹಾಕಿ 5 ನಿಮಿಷಗಳ ಕಾಲ ಬೇಯಿಸಿ ಅದಕ್ಕೆ ರುಬ್ಬಿದ ಮಿಸ್ರಣ & ಉಪ್ಪು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಸೇರಿಸಿದರೆ ಟಾಮೋಟ ಸಾರು ರೆಡಿ.

Uddina Vade
Uddina Vade

ಮಾಡುವ ವಿಧಾನ:
ಉದ್ದಿನ ಕಾಳು 1 ಲೋಟ
ಕಾಳುಮೆಣಸು 10-15
ತೆಂಗಿನ ಕಾಯಿ
ಹಸಿಮೆಣಸಿನಕಾಯಿ 3-5
ಅಡಿಗೆ ಸೋಡ ಸ್ವಲ್ಪ
ಉಪ್ಪು ರುಚ್ಚಿಗೆ
ಎಣ್ಣೆ ಕರಿಯಲು
ಮಾಡುವ ವಿಧಾನ:
1. ಉದ್ದಿನ ಕಾಲನ್ನು 2-3 ಗಂಟೆ ನೆನೆಸಿ ಅದನ್ನು ಕಟ್ಟಿಯಾಗಿ ರುಬ್ಬಿಕೊಳ್ಳಿ.
2. ರುಬ್ಬಿದ ಹಿಟ್ಟಿಗೆ ಹಚ್ಚಿದ ಮೆಣಸಿನಕಾಯಿ, ತೆಂಗಿನ ಚುರು, ಕಾಳುಮೆಣಸು, ಸೋಡಾ, ಉಪ್ಪು ಹಾಕಿ ಕಲಸಿಕೊಳ್ಳಿ.
3. ಎಣ್ಣೆಯನ್ನು ಬಾಣಲೆಗೆ ಹಾಕಿ ಬಿಸಿಯಾದ ನಂತರ ಅದಕ್ಕೆ ವಡೆಯ ಆಕಾರದಲ್ಲಿ ಹಾಕಿ ಕರಿದರೆ. ಬಿಸಿಬಿಸಿ ಉದ್ದಿನ ವಡೆ ರೆಡಿ ಇದನ್ನು ತೆಂಗಿನ ಚಟ್ನಿ ಜೊತೆ ತಿಂದರೆ ತುಂಬ ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:
ದೋಸೆ ಹಿಟ್ಟು
ಟಮೋಟ 2
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಬೆಣ್ಣೆ 2 ಚಮಚ
ಉಪ್ಪು ಸ್ವಲ್ಪ
ಮಾಡುವ ವಿಧಾನ:
1. ಟಮೋಟ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಹಚ್ಚಿಕೊಳ್ಳಿ. ಅದನ್ನು ಸ್ವಲ್ಪ ಉಪ್ಪು ಸಿರಿಸಿ ಬೆರೆಸಿ.
2. ಕಾದ ತವದ ಮೇಲೆ ಸ್ವಲ್ಪ ಬೆಣ್ಣೆ ಸವರಿ ದೋಸೆಯನ್ನು ಹಾಕಿ ನಂತರ ರೆಡಿ ಇರುವ ಮಿಸ್ರನವನ್ನು ದೋಸೆಯ ಮೇಲೆ ಹಾಕಿ ಅದರ ಮೇಲೆ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಎರಡು ಕಡೆ ಬೇಯಿಸಿದರೆ ಟಮೋಟದೋಸೆ ಸಿದ್ದ.

ಬೇಕಾಗುವ ಸಾಮಗ್ರಿಗಳು:
ದೋಸೆ ಹಿಟ್ಟು
ಪುದೀನಾ ಸೊಪ್ಪು ಸ್ವಲ್ಪ
ಎಣ್ಣೆ
ಉಪ್ಪು
ಮಾಡುವ ವಿಧಾನ:
1. ಪುದೀನಾ ಸೊಪ್ಪನ್ನು ರುಬ್ಬಿಕೊಂಡು ದೋಸೆ ಹಿಟ್ಟಿನ ಜೊತೆ ಬೆರೆಸಿ.
2. ಕಾದ ತವದ ಮೇಲೆ ಎಣ್ಣೆ ಸವರಿ ದೋಸೆಯನ್ನು ಹಾಕಿ ಎರಡು ಕಡೆ ಬೇಯಿಸಿದರೆ ದೋಸೆ ತಿನ್ನಲು ರೆಡಿ ಮಾಡಲು ಸುಲಭ.

ಬೇಕಾಗುವ ಸಾಮಗ್ರಿಗಳು:
ಪುದೀನಾ ಸೊಪ್ಪು ಸ್ವಲ್ಪ
ತೆಂಗಿನ ತುರಿ 1 ಕಪ್
ಉರಿಕಡಲೆ 1/4 ಕಪ್
ಹಸಿಮೆಣಸಿನಕಾಯಿ 2-3
ಹುಣಸೆ ಹಣ್ಣು ಸ್ವಲ್ಪ
ಬೆಳ್ಳುಳ್ಳಿ 5-6
ಉಪ್ಪು
ಮಾಡುವ ವಿಧಾನ:
1. ಮೇಲೆ ತಿಳಿಸಿದ ಎಲ್ಲವನ್ನೂ ಹಾಕಿ ಅದಕ್ಕೆ ನೀರು ಸೇರಿಸಿ ರುಬ್ಬಿದರೆ ಪುದೀನಾ ಚಟ್ನಿ ಸಿದ್ದ.

ಬೇಕಾಗುವ ಸಾಮಗ್ರಿಗಳು:
ಅನ್ನ 1 ಕಪ್
ನಿಂಬೆ ಹಣ್ಣು 1
ಈರುಳ್ಳಿ 1
ಹಸಿಮೆಣಸಿನಕಾಯಿ 2
ಕಡಲೆಬೇಳೆ 1 ಚಮಚ
ಕಡಲೆಬೀಜ 2 ಚಮಚ
ಉದ್ದಿನಬೇಳೆ  1 ಚಮಚ
ಅರಿಸಿಣ ಸ್ವಲ್ಪ
ಉಪ್ಪು
ಕರಿಬೇವು
ಕೊತ್ತಂಬರಿಸೊಪ್ಪು
ಎಣ್ಣೆ 4 ಚಮಚ
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ

ಮಾಡುವ ವಿಧಾನ:
1 ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ, ನಿಂಬೆಹಣ್ಣಿನ ರಸ ತೆಗೆದುಕೊಳ್ಳಿ. ಕಡಲೆಬೀಜವನ್ನು ಸ್ವಲ್ಪ ಎಣ್ಣೆ ಹಾಕಿ ಉರಿದುಕೊಳ್ಳಿ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಈರುಳ್ಳಿ, ಮೆಣಸಿನಕಾಯಿ,ಕರಿಬೇವು ಹಾಕಿ ಬಾಡಿಸಿ ಅದಕ್ಕೆ ಅರಿಸಿಣ, ಉಪ್ಪು ಹಾಕಿ ಬಾಡಿಸಿ ಕೊನೆಯಲ್ಲಿ ನಿಂಬೆಹಣ್ಣಿನ ರಸ, ಕೊತ್ತಂಬರಿಸೊಪ್ಪು ಹಾಕಿ ಅದಕ್ಕೆ ಅನ್ನವನ್ನು ಬೆರೆಸಿದರೆ ಚಿತ್ರಾನ್ನ ರೆಡಿ

Fried Veg Rice
Fried Veg Rice

ಬೇಕಾಗುವ ಸಾಮಗ್ರಿಗಳು:
ಬೀನ್ಸ್  2
ಕ್ಯಾರೆಟ್ ಸ್ವಲ್ಪ
ಹಸಿಮೆಣಸಿನಕಾಯಿ 2
ಈರುಳ್ಳಿ 1
ಸಾಸಿವೆ
ಜೀರಿಗೆ
ಕರಿಬೇವು
ಅನ್ನ 1 ಕಪ್
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1 ಬೀನ್ಸ್, ಕ್ಯಾರೆಟ್, ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ ಬಾಡಿಸಿ ಅದಕ್ಕೆ ಬೀನ್ಸ್, ಕ್ಯಾರೆಟ್ ಹಾಕಿ ಬಾಡಿಸಿ ಅದಕ್ಕೆ ಉಪ್ಪು ಹಾಕಿ ಬಾಡಿಸಿ ಅನ್ನ ಹಾಕಿ ಕಳಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ಸಿದ್ದ.

ಬೇಕಾಗುವ ಸಾಮಗ್ರಿಗಳು:

ತೊಗರಿಬೇಳೆ 1 ಲೋಟ
ಬೀನ್ಸ್ 3
ಕ್ಯಾರೆಟ್ 1/2
ಟೊಮೋಟ 2
ಈರುಳ್ಳಿ 1
ಕಡಲೇಬೇಳೆ 1 ಚಮಚ
ಉದ್ದಿನಬೇಳೆ 1 ಚಮಚ
ಜೀರಿಗೆ 1 ಚಮಚ
ಒಣಮೆಣಸಿನಕಾಯಿ 4
ಹುಣಸೆಹಣ್ಣು ಸ್ವಲ್ಪ
ಕರಿಬೇವು
ಕೊತ್ತಂಬರಿಸೊಪ್ಪು
ಸಾಸಿವೆ
ಎಣ್ಣೆ 3 ಚಮಚ
ತೆಂಗಿನತುರಿ ಸ್ವಲ್ಪ
ಅರಿಸಿಣ
ಕೊತ್ತಂಬರಿ ಬೀಜ 1 ಚಮಚ

ಮಾಡುವ ವಿಧಾನ:
1 ಒಂದು ಕುಕ್ಕರ್‌ಗೆ ತೊಗರಿಬೇಳೆ, ಚಿಟಿಕೆ ಅರಿಸಿಣ, 3 ಹನಿ ಎಣ್ಣೆ ಹಾಕಿ ಚೆನ್ನಾಗಿ ಸ್ಯಾಸ್ ಆಗುವವರೆಗೆ ಬೇಯಿಸಿಕೊಳ್ಳಿ.
2 ಒಂದು ಬಾಣಲೆಗೆ ಕಡಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ, ಜೀರಿಗೆ, ತೆಂಗಿನತುರಿ, ಮೆಣಸಿನಕಾಯಿಯನ್ನು ಉರಿದುಕೊಂಡು ಪುಡಿ ಮಾಡಿ.
3 ಬೀನ್ಸ್, ಕ್ಯಾರೆಟ್, ಟೊಮೋಟ, ಈರುಳ್ಳಿಯನ್ನು ಹಚ್ಚಿಕೊಳ್ಳಿ.
4 ಒಂದು ಬಾಣಲೆಗೆ ಎಣ್ಣೆ, ಸಾಸಿವೆ,ಈರುಳ್ಳಿ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಬಾಡಿಸಿ ನಂತರ ಹಚ್ಚಿದ ತರಕಾರಿಗಳನ್ನು ಹಾಕಿ ಬಾಡಿಸಿ ಅದಕ್ಕೆ ಬೆಂದ ತೊಗರಿಬೇಳೆಯನ್ನು ಮಿಕ್ಸ್ ಮಾಡಿ ಸಾಂಬಾರ್ ಪುಡಿ ಮತ್ತು ಪುಡಿ ಮಾಡಿದ ಮಸಾಲೆಯನ್ನು ಎಷ್ಟು ಬೇಕು ಹಾಕಿಕೊಂಡು ಬೇಯಿಸಿಕೊಳ್ಳಿ ಅದಕ್ಕೆ ಹುಣಸೆಹಣ್ಣಿನರಸ ಹಾಕಿ ಉಪ್ಪು, ಕೊತ್ತಂಬರಿಸೊಪ್ಪು ಹಾಕಿದರೆ ಬಿಸಿಬಿಸಿ ಸಾಂಬಾರ್ ಪುಡಿ ರೆಡಿ.

ಬೇಕಾಗುವ ಸಾಮಗ್ರಿಗಳು:
ಪನ್ನೀರ್ 1 ಪ್ಯಾಕ್
ಪುದೀನಾ ಸ್ವಲ್ಪ
ಈರುಳ್ಳಿ 1
ಟೊಮೋಟ 2
ತೆಂಗಿನತುರಿ ಸ್ವಲ್ಪ
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 6 ಎಸಳು
ಚಿಲ್ಲಿ ಪುಡಿ 1 ಚಮಚ
ಕೊತ್ತಂಬರಿ ಪುಡಿ 2 ಚಮಚ
ಗರಂ ಮಸಾಲಾ 1ಚಮಚ
ಎಣ್ಣೆ
ಸಾಸಿವೆ
ಕರಿಬೇವು
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1 ಪನ್ನೀರ್, ಈರುಳ್ಳಿಯನ್ನು ಹಚ್ಚಿಕೊಳ್ಳಿ,
2 ತೆಂಗಿನತುರಿ, ಪುದೀನಾ, ಶುಂಠಿ, ಬೆಳ್ಳುಳ್ಳಿ, ಟೊಮೋಟವನ್ನು ರುಬ್ಬಿಕೊಳ್ಳಿ.
3 ಒಂದು ಬಾಣಲೆಗೆ ಎಣ್ಣೆ, ಸಾಸಿವೆ .ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ ಅದಕ್ಕೆ ರುಬ್ಬಿದ ಮಿಶ್ರಣವ, ಪನೀರ್ ಹಾಕಿ ಸ್ವಲ್ಪ ನೀರು ಸೇರಿಸಿ, ಆಮೇಲೆ ಚಿಲ್ಲಿ, ಕೊತ್ತಂಬರಿ, ಗರಂ ಮಸಾಲಾ ಎಲ್ಲವನ್ನೂ ಹಾಕಿ ಬಾಡಿಸಿ ಕೊನೆಯಲ್ಲಿ ಉಪ್ಪು ಮತ್ತು ಕೊತ್ತಂಬರಿಸೊಪ್ಪು ಹಾಕಿದರೆ ತಿನ್ನಲು ರೆಡಿ.

ಬೇಕಾಗುವ ಸಾಮಗ್ರಿಗಳು:
ಟೊಮೋಟ 2
ಈರುಳ್ಳಿ 1
ಹಸಿ ಬಟಾಣಿ ಸ್ವಲ್ಪ
ಕಡಲೆಬೇಳೆ 1 ಚಮಚ
ಚಕ್ಕೆ 1
ಲವಂಗ 4
ಮೊಗ್ಗು 2
ಪಲಾವ್ ಎಲೆ 2
ತೆಂಗಿನ ತುರಿ ಸ್ವಲ್ಪ
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 5 ಎಸಳು
ಮೆಣಸಿನಪುಡಿ 1 ಚಮಚ
ಕೊತ್ತಂಬರಿ ಪುಡಿ 2ಚಮಚ
ಗರಂ ಮಸಾಲಾ 1 ಚಮಚ
ಉಪ್ಪು
ಕರಿಬೇವು
ಎಣ್ಣೆ 4 ಚಮಚ
ಅಕ್ಕಿ 2 ಲೋಟ

ಮಾಡುವ ವಿಧಾನ:
1 ಟೊಮೋಟ, ಈರುಳ್ಳಿಯನ್ನು ಹಚ್ಚಿಕೊಳ್ಳಿ.
2 ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿಯನ್ನು ಹಚ್ಚಿಕೊಳ್ಳಿ.
3 ಒಂದು ಕುಕ್ಕರ್‌ಗೆ ಎಣ್ಣೆ, ಸಾಸಿವೆ,ಜೀರಿಗೆ, ಕಡಲೆಬೇಳೆ, ಚಕ್ಕೆ, ಲವಂಗ, ಮೊಗ್ಗು, ಪಲಾವ್ ಎಲೆ, ಈರುಳ್ಳಿ,ಕರಿಬೇವು ಹಾಕಿ ಬಾಡಿಸಿ ನಂತರ ರುಬ್ಬಿದ ವಿಶ್ರಣವನ್ನು ಹಾಕಿ ಬಾಡಿಸಿ ಅಕ್ಕಿ, ನೀರು 1:2 ರಂತೆ ಹಾಕಿ ಅದಕ್ಕೆ ಮೆಣಸಿನಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ, ಉಪ್ಪು ಹಾಕಿ 3 ವಿಷಲ್ ಕೂಗಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ರೆಡಿ.

ಬೇಕಾಗುವ ಸಾಮಾಗ್ರಿಗಳು:
ರವೆ -1ಕಪ್
ಸಕ್ಕರೆ-1ಕಪ್
ಏಲಕ್ಕಿ ಪುಡಿ
ಹಾಲು
ದ್ರಾಕ್ಷಿ
ಗೋಡಂಬಿ
ತುಪ್ಪ
ಕೊಬ್ಬರಿ

ಮಾಡುವ ವಿಧಾನ:
1-ಒಂದು ಪಾತ್ರೆಯಲ್ಲಿ 2ಚಮಚ ತುಪ್ಪ ಹಾಕಿ ಅದಕ್ಕೆರವೆಯನ್ನು ಹಾಕಿ ಬಾಡಿಸಿ
2-ದ್ರಾಕ್ಷಿ,ಗೋಡಂಬಿಯನ್ನು ತುಪ್ಪದಲ್ಲಿ ಉರಿಯಿರಿ.
3-ಹಾಲನ್ನು ಬಿಸಿ ಮಾಡಿ
4-ಒಂದು ಪಾತ್ರೆಗೆ ಎಲ್ಲವನ್ನು ಹಾಕಿ ಮಿಕ್ಸ್ ಮಾಡಿ ಅದಕ್ಕೆ ಹಾಲನ್ನು ಹಾಕಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿದರೆ ರವೆ ಉಂಡೆ ರೆಡಿ.

ಬೇಕಾಗುವ ಸಾಮಗ್ರಿಗಳು:
ಅನ್ನ 2 ಕಪ್
ಕ್ಯಾಪ್ಸಿಕಂ 2
ಟೊಮೋಟ 2
ಈರುಳ್ಳಿ 1
ನಿಂಬೆ ಹಣ್ಣು 1
ವಾಂಗಿಬಾತ್ ಪುಡಿ 4 ಚಮಚ
ಕಡಲೆಬೀಜ 2 ಚಮಚ
ಕಡಲೆಬೇಳೆ 2 ಚಮಚ
ಎಣ್ಣೆ 4 ಚಮಚ
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1 ಕ್ಯಾಸಿಕಂ, ಟೊಮೋಟ, ಈರುಳ್ಳಿಯನ್ನು ಹಚ್ಚಿಕೊಳ್ಳಿ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ ನಂತರ ಕ್ಯಾಸಿಕಂ ಮತ್ತು ಟೊಮೋಟ ಹಾಕಿ ಬಾಡಿಸಿ ಅದು ಬೆಂದ ಮೇಲೆ  ಅದಕ್ಕೆ ವಾಂಗಿಬತ್ ಪುಡಿ ಮತ್ತು ಉಪ್ಪು ಹಾಕಿದರೆ ಸಿದ್ದ. ಕೊನೆಯಲ್ಲಿ ಕೊತ್ತಂಬರಿ ಮತ್ತು ನಿಂಬೆ ರಸ ಹಾಕಿ ಅನ್ನ ಹಾಕಿ ಕಲಸಿ, ಸ್ವಲ್ಪ ಎಣ್ಣೆ ಹಾಕಿ ಬೇರೆ ಪಾತ್ರೆಯಲ್ಲಿ ಕಡಲೆಬೀಜವನ್ನು ಉರಿದುಕೊಳ್ಳಿ. ಅದಕ್ಕೆ ಹಾಕಿದರೆ ಸಿದ್ದ.

Chakli
Chakli

ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು 1/2 kg
ಉರಿಗಡಲೆ 50 ಗ್ರಾಂ
ಜೀರಿಗೆ
ಎಣ್ಣೆ ಕರಿಯಲು
ತುಪ್ಪ ಸ್ವಲ್ಪ

ಮಾಡುವ ವಿಧಾನ:
1 ತುಪ್ಪವನ್ನು ಬಿಸಿಮಾಡಿಕೊಳ್ಳಿ, ಬಿಸಿ ನೀರಿಗೆ ಸ್ವಲ್ಪ ಅಕ್ಕಿಹಿಟ್ಟು ಮತ್ತು ಉಪ್ಪು ಹಾಕಿ ಗಂಜಿ ತಯಾರಿಸಿಕೊಳ್ಳಿ. ಹಾರಲು ಬಿಡಿ ನಂತರ ಅಕ್ಕಿಹಿಟ್ಟು, ಪುಡಿಮಾಡಿದ ಉರಿಗಡಲೆ, ಜೀರಿಗೆ, ತುಪ್ಪ ಹಾಕಿ ಕಲಸಿಕೊಳ್ಳಿ. ಕಲಸಿದ ಮಿಶ್ರಣವನ್ನು ಚಕ್ಕಲಿ ಮಾಡುವುದರಲ್ಲಿ ಹಾಕಿ ರೌಂಡಾಗಿ ಮಾಡಿಕೊಳ್ಳಿ.
2 ಎಣ್ಣೆಯನ್ನು ಬಾಣಲೆಗೆ ಹಾಕಿ ಬಿಸಿ ಮಾಡಿ ಅದಕ್ಕೆ ಮಾಡಿದ ಚಕ್ಕುಲಿ ಹಾಕಿ ಕರಿದರೆ ರೆಡಿಯಾಗುವುದು.

ಬೇಕಾಗುವ ವಿಧಾನ:
ಬಟಾಣಿ 1 ಲೋಟ
ಕಡ್ಲೆ ಕಾಳು 1 ಲೋಟ
ಈರುಳ್ಳಿ 1
ಟೊಮೋಟ 2
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 5 ಎಸಳು
ತೆಂಗಿನತುರಿ ಸ್ವಲ್ಪ
ಚಿಲ್ಲಿ ಪುಡಿ 1 ಚಮಚ
ಕೋರಿಯಾನ್‌ಡರ್ ಪುಡಿ 2 ಚಮಚ
ಗರಂ ಮಸಾಲಾ
ಉಪ್ಪು
ಎಣ್ಣೆ
ಸಾಸಿವೆ
ಕರಿಬೇವು
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1 ಬಟಾಣಿ, ಕಡ್ಲೆ ಕಾಳನ್ನು ರಾತ್ರಿಯೇ ನೆನೆಸಿ, ಬೇಯಿಸಿಕೊಳ್ಳಿ.
2 ಟೊಮೋಟ, ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿಯನ್ನು ರುಬ್ಬಿಕೊಳ್ಳಿ.
3 ಒಂದು ಬಾಣಲೆಗೆ ಎಣ್ಣೆ, ಸಾಸಿವೆ,ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ, ಅದಕ್ಕೆ ಬೇಯಿಸಿದ ಕಾಳು, ರುಬ್ಬಿದ ಮಿಶ್ರಣವನ್ನು ಹಾಕಿ ಬಡಿಸಿ ಆಮೇಲೆ ಚಿಲ್ಲಿ, ಕೋರಿಯಾನ್‌ಡರ್, ಗರಂ ಮಸಾಲವನ್ನೂ ಹಾಗೂ ಉಪ್ಪು ಸೇರಿಸಿ ಕುದಿಸಿದರೆ ಆಯಿತು ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿ.

Avarekayi Sagu
Avarekayi Sagu

ಬೇಕಾಗುವ ಸಾಮಗ್ರಿಗಳು
ಅವರೆಕಾಯಿ
ಬೀನ್ಸ್ 5
ಕ್ಯಾರೆಟ್ 1
ಟೊಮೋಟ 1
ಈರುಳ್ಳಿ 1
ಕಾಯಿ ತುರಿ ಸ್ವಲ್ಪ
ಉರಿಗಡಲೆ ಸ್ವಲ್ಪ
ಸಾಂಬಾರ್ ಪುಡಿ 2 ಚಮಚ
ಎಣ್ಣೆ
ಸಾಸಿವೆ
ಕರಿಬೇವು
ಕೊತ್ತಂಬರಿ ಸೊಪ್ಪು
ಉಪ್ಪು

ಮಾಡುವ ವಿಧಾನ:
1 ಬೀನ್ಸ್, ಕ್ಯಾರೆಟ್, ಟೊಮೋಟ, ಈರುಳ್ಳಿಯನ್ನು ಹಚ್ಚಿಕೊಳ್ಳಿ.
2 ತೆಂಗಿನತುರಿ, ಉರಿಗಡಲೆಯನ್ನು ನೀರು ಸೇರಿಸಿ ರುಬ್ಬಿಕೊಳ್ಳಿ.
3 ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ,ಈರುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಅವರೆಕಾಯಿ, ಬೀನ್ಸ್, ಕ್ಯಾರೆಟ್, ಟೊಮೋಟವನ್ನು ಹಾಕಿ ಬಾಡಿಸಿ ಅದಕ್ಕೆ ನೀರು ಸೇರಿಸಿ ನಂತರ ಸಾಂಬಾರ್ ಪುಡಿ ಹಾಕಿ ಚೆನ್ನಾಗಿ ಬೇಯಿಸಿ ಆಮೇಲೆ ರುಬ್ಬಿದ ಮಿಶ್ರಣ ಉಪ್ಪು ಹಾಕಿ ಬೇಯಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿ.

Badanekayi pulao
Badanekayi pulao

ಬೇಕಾಗುವ ಸಾಮಗ್ರಿಗಳು:
ಬದನೆಕಾಯಿ 2
ಕ್ಯಾಸಿಕಂ 1
ಈರುಳ್ಳಿ 1
ತೇಂಗೆನತೂರಿ ಸ್ವಲ್ಪ
ಚಕ್ಕೆ 1
ಲವಂಗ 4
ಪಲಾವ್ ಎಲೆ 2
ಕಡಲೆಬೇಳೆ 1 ಚಮಚ
ಬಟಾಣಿ
ಕರಿಬೇವು
ಕೊತ್ತಂಬರಿಸೊಪ್ಪು
ಎಣ್ಣೆ
ಮೆಣಸಿನಪುಡಿ 1 ಚಮಚ
ಕೊಟ್ತಂಬರಿಪುಡಿ 2 ಚಮಚ
ಗರಂ ಮಸಾಲ 1 ಚಮಚ
ಟೊಮೋಟ 2
ಅಕ್ಕಿ 3 ಲೋಟ
ಸಾಸಿವೆ
ಜೀರಿಗೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್

ಮಾಡುವ ವಿಧಾನ:
1 ಬದನೆಕಾಯಿ,ಕ್ಯಾಸಿಕಂ,ಈರುಳ್ಳಿ. ಟೊಮೋಟವನ್ನು ಹಚ್ಚಿಕೊಳ್ಳಿ.
2 ತೆಂಗಿನತುರಿ, ಶುಂಠಿ ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಿ.
3 ಒಂದು ಕುಕ್ಕರ್‌ಗೆ ಎಣ್ಣೆ,ಸಾಸಿವೆ,ಜೀರಿಗೆ, ಚಕ್ಕೆ,ಲವಂಗ,ಪಲಾವ್ ಎಲೆ, ಕಡಲೆಬೇಳೆ, ಈರುಳ್ಳಿ,ಕರಿಬೇವು ಹಾಕಿ ಬಾಡಿಸಿ ಅದಕ್ಕೆ ಹಚ್ಚಿದ ತರಕಾರಿ, ಬಟಾಣಿ ಹಾಕಿ ಬಡಿಸಿ,ನಂತರ ರುಬ್ಬಿದ ಮಿಶ್ರಣ ಹಾಕಿ ಆಮೇಲೆ ಅಕ್ಕಿ ಹಾಕಿ ಬಡಿಸಿ, 1:2 ಅಂತೇ ನೀರು ಹಾಕಿ ನಂತರ ಮಸಾಲ ಹಾಕಿ ಉಪ್ಪು ಸೇರಿಸಿ ಕುದಿ ಬಂದ ನಂತರ 3 ವಿಷಲ್ ಆದರೆ ಪಲಾವ್ ರೆಡಿ ಕೊನೆಯಲ್ಲಿ ಕೊತ್ತಂಬರಿ ಹಾಕಿ.

ಬೇಕಾಗುವ ಸಾಮಗ್ರಿ:
ದೋಸೆ ಹಿಟ್ಟು
ಈರುಳ್ಳಿ-1
ಕ್ಯಾರೆಟ್-1
ಹಸಿಮೆಣಸಿನಕಾಯಿ-1
ಕಡಲೆಬೇಳೆ
ಸಾಸಿವೆ
ಜೀರಿಗೆ
ಕೊತ್ತಂಬರಿಸೊಪ್ಪು
ಉಪ್ಪು

ಮಾಡುವ ವಿಧಾನ:
1- ಕ್ಯಾರೆಟ್‌ನ್ನು ತುರಿದುಕೊಳ್ಳಿ,ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
2- ಎಣ್ಣೆ,ಸಾಸಿವೆ,ಜೀರಿಗೆ,ಕಡಲೆಬೇಳೆಯನ್ನು ಒಗ್ಗರಣೆ ಮಾಡಿ.
3-ದೋಸೆ ಹಿಟ್ಟು, ಈರುಳ್ಳಿ, ಕ್ಯಾರೆಟ್, ಮೆಣಸಿನಕಾಯಿ, ಉಪ್ಪು,ಕೊತ್ತಂಬರಿಸೊಪ್ಪು, ಒಗ್ಗರಣೆಯನ್ನು ಹಾಕಿ ಮಿಕ್ಸ್ ಮಾಡಿ.
4- ಪಡ್ಡು ಪ್ಯಾನ್ನ್ನು ಬಿಸಿ ಮಾಡಿ,ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ನಂತರ ಮಿಶ್ರಣವನ್ನು ಹಾಕಿ ಎರಡು ಕಡೆ ಬೇಯಿಸಿ.

ಬೇಕಾಗುವ ಸಾಮಗ್ರಿಗಳು:
ಶಾವಿಗೆ 1 ಕಪ್
ಬೀನ್ಸ್ 3
ಕ್ಯಾರೆಟ್ 1
ತೆಂಗಿನತುರಿ ಸ್ವಲ್ಪ
ಹಸಿಮೆಣಸಿನಕಾಯಿ 2
ಈರುಳ್ಳಿ 1
ಬಟಾಣಿ ಸ್ವಲ್ಪ
ಸಾಸಿವೆ
ಜೀರಿಗೆ
ಎಣ್ಣೆ 3 ಚಮಚ
ಉಪ್ಪು
ಕರಿಬೇವು
ನಿಂಬೆರಸ ಸ್ವಲ್ಪ
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1 ಬೀನ್ಸ್, ಕ್ಯಾರೆಟ್, ಈರುಳ್ಳಿ,ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ. ಬೀನ್ಸ್, ಕ್ಯಾರೆಟ್, ಬಟಾಣಿಯನ್ನು ಬೇಯಿಸಿಕೊಳ್ಳಿ.
2 ಸ್ವಲ್ಪ ಎಣ್ಣೆ ಹಾಕಿ ಶಾವಿಗೆಯನ್ನು ಉರಿದುಕೊಳ್ಳಿ.
3 ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಈರುಳ್ಳಿ, ಕಡಲೆಬೇಳೆ, ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿ ಅದಕ್ಕೆ ಬೇಯಿಸಿದ ತರಕಾರಿ, ಬಟಾಣಿ ಹಾಕಿ ಬಾಡಿಸಿ ಆಮೇಲೆ 1 ಲೋಟ ನೀರು, ಉಪ್ಪು ಹಾಕಿ ಕುದಿ ಬಂದ ಮೇಲೆ ಅದಕ್ಕೆ ಉರಿದ ಶಾವಿಗೆಯನ್ನು ಹಾಕಿದರೆ ರೆಡಿ ಅದರ ಮೇಲೆ ಕೊತ್ತಂಬರಿಸೊಪ್ಪು, ತೆಂಗಿನತುರಿ ಹಾಕಿದರೆ ಸಿದ್ದ.

ಬೇಕಾಗುವ ಸಾಮಗ್ರಿಗಳು:
ಪುದೀನಾ
ಬೀನ್ಸ್ 3
ಕ್ಯಾರೆಟ್ 1
ಬಟಾಣಿ ಸ್ವಲ್ಪ
ಈರುಳ್ಳಿ 1
ಟೊಮೋಟ 2
ಚಕ್ಕೆ 1
ಲವಂಗ 4
ಎಲ್ಲಕ್ಕಿ 2
ಪಲಾವ್ ಎಲೆ 2
ಮೊಗ್ಗು 2
ಚಿಲ್ಲಿ 1 ಚಮಚ
ಕೊತ್ತಂಬರಿ 2ಚಮಚ
ಗರಂ ಮಸಾಲಾ 1 ಚಮಚ
ಎಣ್ಣೆ 4 ಚಮಚ
ತೆಂಗಿನತುರಿ ಸ್ವಲ್ಪ
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 6 ಎಸಳು
ಅಕ್ಕಿ 3 ಲೋಟ
ಸಾಸಿವೆ
ಕರಿಬೇವು
ಕೊತ್ತಂಬರಿಸೊಪ್ಪು
ಉಪ್ಪು

ಮಾಡುವ ವಿಧಾನ:
1 ತರಕಾರಿಗಳನ್ನು ಹಚ್ಚಿಕೊಳ್ಳಿ.
2 ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿ, ಪುದೀನಾ, ಟೊಮೋಟವನ್ನು ರುಬ್ಬಿಕೊಳ್ಳಿ.
3 ಒಂದು ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಚಕ್ಕೆ, ಲವಂಗ, ಮೊಗ್ಗು, ಪಲಾವ್ ಎಲೆ, ಏಲ್ಲಕ್ಕಿ,ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ ಆಮೇಲೆ ರುಬ್ಬಿದ ಮಿಶ್ರಣ, ಹಚ್ಚಿದ ತರಕಾರಿಗಳನ್ನು ಹಾಕಿ ಬಾಡಿಸಿ ಅದಕ್ಕೆ ಅಕ್ಕಿ ಸೇರಿಸಿ ಬಾಡಿಸಿ 1:2 ಪ್ರಕಾರ ನೀರು ಹಾಕಿ ಅದಕ್ಕೆ ಚಿಲ್ಲಿ, ಕೊತ್ತಂಬರಿ, ಗರಂ ಮಸಾಲಾ, ಉಪ್ಪು ಸೇರಿಸಿ ಕೂಡಿ ಬಂದ ನಂತರ ಮುಚ್ಚಳ ಮುಚ್ಚಿ 3 ವಿಷಲ್ ಕೂಗಿಸಿ ತಣ್ಣಗಾದ ನಂತರ ಕೊತ್ತಂಬರಿಸೊಪ್ಪು ಹಾಕಿದರೆ ಸಿದ್ದವಾಗುವುದು.

ಬೇಕಾಗುವ ಸಾಮಗ್ರಿಗಳು:
ಸಬ್ಬಕ್ಕಿ ಸೊಪ್ಪು
ಈರುಳ್ಳಿ 2
ಬೆಳ್ಳುಳ್ಳಿ 5 ಎಸಳು
ಮೆಣಸಿನಕಾಯಿ 2
ತೊಗರಿಬೇಳೆ
ಸಾಂಬಾರ್ ಪುಡಿ
ಉಪ್ಪು
ಸಾಸಿವೆ
ಕರಿಬೇವು
ಕೊತ್ತಂಬರಿಸೊಪ್ಪು
ತೆಂಗಿನತುರಿ ಸ್ವಲ್ಪ
ಉರಿಗಡಲೆ
ಟಮೋಟ 2

ಮಾಡುವ ವಿಧಾನ:
1 ಸೊಪ್ಪನ್ನು ತೊಳೆದು, ಒಂದು ಕುಕ್ಕರ್‌ಗೆ ಸೊಪ್ಪು,ತೊಗರಿಬೇಳೆ, ಸಾಂಬಾರ್ ಪುಡಿ, ಈರುಳ್ಳಿ, ಬೆಳ್ಳುಳ್ಳಿ, ತಮೋಟ, ನೀರು ಹಾಕಿ 3-4 ವಿಷಲ್ ಕೂಗಿಸಿ
2 ತೆಂಗಿನತುರಿ, ಉರಿಗಡಲೆಯನ್ನು ಹಾಕಿ ರುಬ್ಬಿಕೊಳ್ಳಿ.
3 ಕುಕ್ಕರ್ ತಣ್ಣಗಾದ ಮೇಲೆ ಅದರಲ್ಲಿರುವ ನೀರನ್ನು ಬಸಿದುಕೊಳ್ಳಿ ನಂತರ ರುಬ್ಬಿಕೊಳ್ಳಿ.
4 ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಈರುಳ್ಳಿ, ಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಬಸಿದ ನೀರನ್ನು ಹಾಕಿ ನಂತರ ಉಪ್ಪು ಹಾಕಿ ಬೇಯಿಸಿ, ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ಸಾಂಬಾರ್ ರೆಡಿ.

ಬೇಕಾಗುವ ಸಾಮಾನು:
ರಾಗಿ ಪುಡಿ
ಉದ್ದಿನಬೇಳೆ ಸ್ವಲ್ಪ
ಈರುಳ್ಳಿ 1
ಕ್ಯಾರೆಟ್ 1
ಹಸಿಮೆಣಸಿನಕಾಯಿ 1
ಕೊತ್ತಂಬರಿಸೊಪ್ಪು
ಉಪ್ಪು
ಎಣ್ಣೆ

ಮಾಡುವ ವಿಧಾನ:
1 ಉದ್ದಿನಬೇಳೆಯನ್ನು ನೆನೆಸಿ ರುಬ್ಬಿಕೊಳ್ಳಿ ಅದಕ್ಕೆ ರಾಗಿ ಪುಡಿ ಹಾಕಿ ಕಳಸಿ 7 ಗಂಟೆಗಳ ಕಾಲ ಬಿಡಿ.
2 ರುಬ್ಬಿದ ಮಿಶ್ರಣಕ್ಕೆ ಈರುಳ್ಳಿ,ಕ್ಯಾರೆಟ್,ಮೆಣಸಿನಕಾಯಿ, ಕೊತ್ತಂಬರಿಸೊಪ್ಪು ಹಾಕಿ ಕಳಸಿ.
3 ತವ ಬಿಸಿಮಾಡಿ ದೋಸೆಯಂತೆ ಹಾಕಿದರೆ ರಾಗಿದೋಸೆ ತಿನ್ನಲು ರೆಡಿ.

Bendekaayi Saagu
Bendekaayi Saagu

ಬೇಕಾಗುವ ವಿಧಾನ:
ಬೆಂಡೇಕಾಯಿ
ಈರುಳ್ಳಿ 1
ಶುಂಠಿ
ಬೆಳ್ಳುಳ್ಳಿ
ತೆಂಗಿನತುರಿ ಸ್ವಲ್ಪ
ಉರಿಗಡಲೆ ಸ್ವಲ್ಪ
ಸಾಂಬಾರ್ ಪುಡಿ
ಟೊಮೋಟ 2
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿಸೊಪ್ಪು
ಉಪ್ಪು

ಮಾಡುವ ವಿಧಾನ:
1 ಬೆಂಡೆಕಾಯಿಯನ್ನು ಹಚ್ಚಿಕೊಂಡು ಅದನ್ನು ಸ್ವಲ್ಪ ಎಣ್ಣೆ ಹಾಕಿ ಉರಿದುಕೊಳ್ಳಿ. ಟೊಮೋಟ, ಈರುಳ್ಳಿಯನ್ನು ಹಚ್ಚಿಕೊಳ್ಳಿ.
2 ತೆಂಗಿನತುರಿ, ಉರಿಗಡಲೆ, ಶುಂಠಿ, ಬೆಳ್ಳುಳ್ಳಿಯನ್ನು ರುಬ್ಬಿಕೊಳ್ಳಿ.
3 ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ ಅದಕ್ಕೆ ಟೊಮೋಟ, ಉರಿದ ಬೆಂಡೆಕಾಯಿ ಹಾಕಿ ಬಾಡಿಸಿ ಅದಕ್ಕೆ ನೀರು, ಸಾಂಬಾರ್ ಪುಡಿಯನ್ನು ಹಾಕಿ ಚೆನ್ನಾಗಿ ಬೇಯಿಸಿ ರುಬ್ಬಿದ ಮಿಶ್ರಣ, ಉಪ್ಪು ಹಾಕಿ ಬಾಡಿಸಿದರೆ ಸಾಗು ರೆಡಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿ.

ಬೇಕಾಗುವ ಸಾಮಗ್ರಿಗಳು:
ರವೆ 1/4kg
ಕ್ಯಾರೆಟ್ 1
ಈರುಳ್ಳಿ 1
ಹಸಿಮೆಣಸಿನಕಾಯಿ 2
ಕೊತ್ತಂಬರಿಸೊಪ್ಪು
ಉಪ್ಪು

ಮಾಡುವ ವಿಧಾನ:
1 ರವೆಯನ್ನು ನೀರಿನಲ್ಲಿ 5 ನಿಮಿಷ ನೆನೆಸಿ ರುಬ್ಬಿಕೊಳ್ಳಿ.
2 ಕ್ಯಾರೆಟನ್ನು ತುರಿದುಕೊಳ್ಳಿ, ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
3 ಕ್ಯಾರೆಟ್, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿಸೊಪ್ಪು,ಉಪ್ಪು, ರುಬ್ಬಿದ ರವೆ ಎಲ್ಲವನ್ನೂ ಹಾಕಿ ಕಲಸಿಕೊಳ್ಳಿ.
4 ತವ ಬಿಸಿ ಮಾಡಿ ಅದರ ಮೇಲೆ ದೋಸೆಯಂತೆ ಹಾಕಿದರೆ ಸಿದ್ದ.

Bru Coffee
Bru Coffee

ಬೇಕಾಗುವ ಸಾಮಗ್ರಿಗಳು:
ಹಾಲು 1 ಕಪ್
ಸಕ್ಕರೆ 1 ಚಮಚ
ಬ್ರೂ ಇನ್ಸ್ಟೆಂಟ್ ಕಾಫೀ ಪುಡಿ

ಮಾಡುವ ವಿಧಾನ:
1 ಹಾಲನ್ನು ಬಿಸಿ ಮಾಡಿಕೊಳ್ಳಿ, ಎರಡು ಗ್ಲಾಸ್ ತೆಗೆದುಕೊಂಡು ಅದಕ್ಕೆ ಸಕ್ಕರೆ, ಕಾಫೀ ಪುಡಿ ಹಾಕಿ ಹಾಲನ್ನು ಮಿಕ್ಸ್ ಮಾಡಿ ಬೆರೆಸಿದರೆ ಕಾಫೀ ರೆಡಿ ಕುಡಿಯಲು.

ಬೇಕಾಗುವ ಸಾಮಗ್ರಿಗಳು:
ಅಲಸಂದೆ ಕಾಳು 1 ಲೋಟ
ಈರುಳ್ಳಿ 1
ಟೊಮೋಟ 2
ಸಾಸಿವೆ
ಸಾಂಬಾರ್ ಪುಡಿ 3 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಎಣ್ಣೆ
ಕರಿಬೇವು
ಕೊತ್ತಂಬರಿಸೊಪ್ಪು
ಉಪ್ಪು

ಮಾಡುವ ವಿಧಾನ:
1 ಈರುಳ್ಳಿಯನ್ನು ಹಚ್ಚಿಕೊಳ್ಳಿ, ಕಾಲನ್ನು ಬೇಯಿಸಿಕೊಳ್ಳಿ.
2 ಎಣ್ಣೆ, ಸಾಸಿವೆ, ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ, ಸ್ವಲ್ಪ ಕಾಲನ್ನು ರುಬ್ಬಿಕೊಂಡು ಅದಕ್ಕೆ ಮಿಕ್ಸ್ ಮಾಡಿ ಉಳಿದ ಕಾಳು, ಟೊಮೋಟ ಹಾಕಿ ಬಾಡಿಸಿ ಅದಕ್ಕೆ ನೀರು, ಸಾಂಬಾರ್ ಪುಡಿ ಹಾಕಿ ಕುದಿಸಿ ನಂತರ ಉಪ್ಪು ಹಾಕಿದರೆ ಸಾಂಬಾರ್ ರೆಡಿ.

Jolada Rotti
Jolada Rotti

ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು
ಬಿಸಿ ನೀರು
ಉಪ್ಪು

ಮಾಡುವ ವಿಧಾನ:
1 ಬಿಸಿ ನೀರು ಮತ್ತು ಜೋಳದ ಹಿಟ್ಟು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
2 ಸ್ವಲ್ಪ ಜೋಳದ ಹಿಟ್ಟನ್ನು ಹಾಕಿ ಅದರ ಮೇಲೆ ದಟ್ಟಿ ಕೊಳ್ಳಿ.
3 ತವ ಬಿಸಿ ಮಾಡಿ ಅದರ ಮೇಲೆ ಬೇಯಿಸಿದರೆ ಜೋಳದ ರೊಟ್ಟಿ ತಿನ್ನಲು ರೆಡಿ.

ಬೇಕಾಗುವ ಸಾಮಗ್ರಿಗಳು:
ಕಡ್ಲೆಪುರಿ 1 ಲೀಟರ್
ಈರುಳ್ಳಿ 1
ಹಸಿಮೆಣಸಿನಕಾಯಿ 2
ಕಡಲೆಬೀಜ
ಕಡಲೆಬೇಳೆ
ಉದ್ದಿನಬೇಳೆ
ಕರಿಬೇವು
ಅರಿಸಿಣ
ನಿಂಬೆಹಣ್ಣು
ಕೊತ್ತಂಬರಿಸೊಪ್ಪು
ಎಣ್ಣೆ
ಸಾಸಿವೆ
ಜೀರಿಗೆ
ಉಪ್ಪು

ಮಾಡುವ ವಿಧಾನ:
1 ಕಡ್ಲೆಪುರಿಯನ್ನು ನೀರಿನಲ್ಲಿ ಹದ್ದಿ ತೆಗೆಯಿರಿ, ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಕಡಲೆಬೀಜ, ಉದ್ದಿನಬೇಳೆ,ಈರುಳ್ಳಿ,ಮೆಣಸಿನಕಾಯಿ,ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಸ್ವಲ್ಪ ಅರಿಸಿಣ, ಉಪ್ಪು ಹಾಕಿ ಬಾಡಿಸಿ ನಂತರ ಕಡ್ಲೆಪುರಿಯನ್ನು ಹಾಕಿ ಬಾಡಿಸಿ ಗ್ಯಾಸ್ ಆರಿಸಿ ಕೊನೆಯಲ್ಲಿ ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿದರೆ ರೆಡಿ.

ಬೇಕಾಗುವ ಸಾಮಗ್ರಿಗಳು:
ಅವರೆಕಾಯಿ ಸ್ವಲ್ಪ
ಈರುಳ್ಳಿ 1
ಬೀನ್ಸ್ 4
ಕ್ಯಾರೆಟ್ 1
ನಿಂಬೆಹಣ್ಣು 1
ಅನ್ನ
ಹಸಿಮೆಣಸಿನಕಾಯಿ 2
ಕರಿಬೇವು
ಕೊತ್ತಂಬರಿಸೊಪ್ಪು
ತೆಂಗಿನತುರಿ
ಕಡಲೆಬೇಳೆ 1 ಚಮಚ
ಕಡಲೆಬೀಜ 1 ಚಮಚ
ಉದ್ದಿನಬೇಳೆ 1 ಚಮಚ
ಅರಿಸಿನ ಸ್ವಲ್ಪ
ಎಣ್ಣೆ
ಸಾಸಿವೆ
ಜೀರಿಗೆ
ಉಪ್ಪು
ಶುಂಠಿ ಬೆಳ್ಳುಳ್ಳಿಪೆಸ್ಟ್

ಮಾಡುವ ವಿಧಾನ:
1 ಅವರೆಕಾಳು, ಬೀನ್ಸ್,ಕ್ಯಾರೆಟನ್ನು ನೀರಿನಲ್ಲಿ ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿಕೊಳ್ಳಿ.
2 ಒಂದು ಪಾತ್ರೆಯಲ್ಲಿ ಎಣ್ಣೆ,ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಈರುಳ್ಳಿ, ಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ನಂತರ ಅದಕ್ಕೆ ಸ್ವಲ್ಪ ಅರಿಸಿಣ ಸೇರಿಸಿ, ಆಮೇಲೆ ಬೆಂದ ತರಕಾರಿಗಳನ್ನು ಹಾಕಿ ನಂತರ ಉಪ್ಪು ಸೇರಿಸಿ ಕೊನೆಯಲ್ಲಿ ನಿಂಬೆ ರಸ, ತೆಂಗಿನತುರಿಯನ್ನು ಹಾಕಿ ಅನ್ನವನ್ನು ಸೇರಿಸಿ ಕಲಸಿದರೆ ರೆಡಿ.

Aalu Bonda
Aalu Bonda

ಬೇಕಾಗುವ ಸಾಮಗ್ರಿಗಳು:

ಬೇಯಿಸಿದ ಆಲೂಗೆಡ್ಡೆ 2
ಸಬ್ಬಕ್ಕಿಸೊಪ್ಪು ಸ್ವಲ್ಪ
ಈರುಳ್ಳಿ 1
ಕೊತ್ತಂಬರಿಸೊಪ್ಪು
ಎಣ್ಣೆ
ಕಡಲೆಹಿಟ್ಟು
ಅಕ್ಕಿಹಿಟ್ಟು 2 ಚಮಚ
ಜೀರಿಗೆ ಸ್ವಲ್ಪ
ಸೋಡಾ ಚಿಟಿಕೆ

ಮಾಡುವ ವಿಧಾನ:
1 ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಕಳಸಿ ಅದಕ್ಕೆ ಸಬ್ಬಕ್ಕಿಸೊಪ್ಪು, ಕೊತ್ತಂಬರಿಸೊಪ್ಪು, ಈರುಳ್ಳಿ, ಮೆಣಸಿನಕಾಯಿ, ಜೀರಿಗೆ, ಉಪ್ಪು ಸೇರಿಸಿ ಕಲಸಿಕೊಳ್ಳಿ.
2 ಕಡಲೆಹಿಟ್ಟು, ಅಕ್ಕಿಹಿಟ್ಟು ಉಪ್ಪು ಹಾಕಿ ಬಜ್ಜಿ ಅದಕ್ಕೆ ಕಲಸಿಕೊಳ್ಳಿ.
3 ಎಣ್ಣೆ ಹಾಕಿ ಕಾದ ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಕಲಸಿದ ಮಿಶ್ರಣದಲ್ಲಿ ಹದ್ಡಿ ಎಣ್ಣೆಯಲ್ಲಿ ಕರಿದರೆ ಆಲೂ ಬೋಂಡಾ ರೆಡಿ.

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ
ಕ್ಯಾರೆಟ್ 1
ಸೌತೆಕಾಯಿ 1
ದಾಳಿಂಬೆ
ಈರುಳ್ಳಿ 1
ಕಾಯಿತುರಿ
ಕರಿಮೆಣಸು
ಹಸಿಮೆಣಸಿನಕಾಯಿ ೧
ಕೊತ್ತಂಬರಿಸೊಪ್ಪು
ನಿಂಬೆಹಣ್ಣು
ಉಪ್ಪು

ಮಾಡುವ ವಿಧಾನ:
1 ಕ್ಯಾರೆಟನ್ನು ತುರಿದುಕೊಂಡು ಈರುಳ್ಳಿ,ಸೌತೆಕಾಯಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ,ಕರಿಮೆಣಸನ್ನು ಪುಡಿ ಮಾಡಿ,ಹೆಸರುಕಾಳನ್ನು ನೆನೆಸಿ
2 ಒಂದು ಪಾತ್ರೆಯಲ್ಲಿ ನೆನೆಸಿದ ಹೆಸರುಕಾಳು, ಕ್ಯಾರೆಟ್, ದಾಳಿಂಬೆ, ಸೌತೆಕಾಯಿ, ಈರುಳ್ಳಿ, ಕಾಯಿತುರಿ,ಮೆಣಸಿನಕಾಯಿ, ಕೊತ್ತಂಬರಿ,ಕರಿಮೆಣಸಿನಪುಡಿ, ಉಪ್ಪು, ನಿಂಬೆಹಣ್ಣಿನರಸ, ಉಪ್ಪು ಹಾಕಿ ಕಲಸಿದರೆ ರೆಡಿ.

ಬೇಕಾಗುವ ಸಾಮಗ್ರಿಗಳು:
ಮೂಲಂಗಿ 2
ತೊಗರಿಬೇಳೆ
ಸಾಂಬಾರ್ ಪುಡಿ 3 ಚಮಚ
ಟೊಮೋಟ 2
ಈರುಳ್ಳಿ 1
ಕರಿಬೇವು
ಸಾಸಿವೆ
ಬೆಳ್ಳುಳ್ಳಿ
ಕೊತ್ತಂಬರಿಸೊಪ್ಪು
ಎಣ್ಣೆ
ಉಪ್ಪು

ಮಾಡುವ ವಿಧಾನ:
1 ಮೂಲಂಗಿ, ಈರುಳ್ಳಿಯನ್ನು ಹಚ್ಚಿಕೊಳ್ಳಿ.
2 ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಮೂಲಂಗಿ, ಈರುಳ್ಳಿ, ತೊಗರಿಬೇಳೆ,ಸಾಂಬಾರ್ ಪುಡಿ,ಟೊಮೋಟ, ನೀರು, ಉಪ್ಪು ಸೇರಿಸಿ 3 ವಿಷಲ್ ಕೂಗಿಸಿ.
3 ಕೊನೆಯಲ್ಲಿ ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಕೊನೆಯಲ್ಲಿ ಸಾಂಬರ್‌ಗೆ ಸೇರಿಸಿದರೆ ರೆಡಿ.

ಬೇಕಾಗುವ ಸಾಮಗ್ರಿಗಳು:
ಆಲೂಗೆಡ್ಡೆ 3
ಹಸಿಮೆಣಸಿನಕಾಯಿ 2
ಈರುಳ್ಳಿ 1
ಕಡಲೆಬೇಳೆ 2 ಚಮಚ
ಕರಿಬೇವು
ಕೊತ್ತಂಬರಿ ಸೊಪ್ಪು
ನಿಂಬೆರಸ
ಸಾಸಿವೆ
ಆರಿಸಿನ
ಎಣ್ಣೆ
ಉಪ್ಪು

ಮಾಡುವ ವಿಧಾನ:
1 ಆಲೂಗೆಡ್ಡೆಯನ್ನು ನೀರಿನಲ್ಲಿ ಬೇಯಿಸಿಕೊಳ್ಳಿ,ನಂತರ ಸಿಪ್ಪೆ ತೆಗೆದು ಸ್ಯಾಸ್ ಮಾಡಿ.
2 ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
3 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಕಡ್ಲೆಬೇಳೆ, ಈರುಳ್ಳಿ, ಮೆಣಸಿನಕಾಯಿ,ಕರಿಬೇವು ಹಾಕಿ ಬಾಡಿಸಿ ಅದಕ್ಕೆ ಬೇಯಿಸಿ ಸ್ಯಾಸ್ ಮಾಡಿದ ಆಲೂಗೆಡ್ಡೆಯನ್ನು ಹಾಕಿ ಆಮೇಲೆ ಅರಿಸಿನ, ಉಪ್ಪು ಸೇರಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು, ನಿಂಬೆ ರಸ ಹಾಕಿದರೆ ರೆಡಿ.

ಬೇಕಾಗುವ ಸಾಮಾಗ್ರಿಗಳು:
ಕಡ್ಲೆ ಪುರಿ
ಕ್ಯಾರೆಟ್ 1
ಈರುಳ್ಳಿ 1
ಹಸಿಮೆಣಸಿನಕಾಯಿ ಪೇಸ್ಟ್
ಉರಿದ ಕಡಲೆಬೀಜ
ಟೊಮೋಟ 1
ಸೌತೆಕಾಯಿ 1
ಖಾರ
ಕೊತ್ತಂಬರಿಸೊಪ್ಪು
ಉಪ್ಪು
ನಿಂಬೆರಸ

ಮಾಡುವ ವಿಧಾನ:
1 ಕ್ಯಾರೆಟನ್ನು ತುರಿದುಕೊಳ್ಳಿ, ಈರುಳ್ಳಿ, ಟೊಮೋಟ, ಸೌತೆಕಾಯಿ, ಕೊಟ್ತಂಬರಿಸೊಪ್ಪನ್ನು ಹಚ್ಚಿಕೊಳ್ಳಿ.
2 ಹಚ್ಚಿದ್ದು, ಖಾರ, ಉಪ್ಪು,ಕಡ್ಲೆ ಪುರಿ ಬೆರೆಸಿದರೆ ಬೇಲ್ ಪುರಿ ತಿನ್ನಲು ಸಿದ್ದ.

ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಅಕ್ಕಿ 1 ಕಪ್
ತೆಂಗಿನ ತುರಿ 1 ಹೋಳು
ಬೆಲ್ಲ ರುಚಿಗೆ
ಎಲ್ಲಕ್ಕಿ 2

ಮಾಡುವ ವಿಧಾನ:
1 ಅಕ್ಕಿಯನ್ನು 5 ಗಂಟೆ ನೆನೆಸಿ ಅದನ್ನು ರುಬ್ಬಿ ಅದಕ್ಕೆ ತೆಂಗಿನ ತುರಿ, ಬೆಲ್ಲ ಎಲ್ಲಕ್ಕಿ ಸೇರಿಸಿ ರುಬ್ಬಿಕೊಳ್ಳಿ.
2 ಪ್ಲೇಟಿನಲ್ಲಿ 5 ನಿಮಿಷ ಹಬೆಯಲ್ಲಿ ಬೇಯಿಸಿದರೆ ರೆಡಿ.

Hesarubele Sambar
Hesarubele Sambar

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ 1 ಚಿಕ್ಕ ಕಪ್
ಟೊಮೋಟ 2
ಈರುಳ್ಳಿ 1
ಸಾಂಬಾರ್ ಪುಡಿ 2 ಚಮಚ
ಸಾಸಿವೆ
ಎಣ್ಣೆ
ಜೀರಿಗೆ
ಕರಿಬೇವು
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
ಹೆಸರುಬೇಳೆಯನ್ನು ಬೇಯಿಸಿಕೊಳ್ಳಿ, ಅದಕ್ಕೆ ಎಣ್ಣೆ, ಸಾಸಿವೆ,ಜೀರಿಗೆ, ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ, ಟೊಮೋಟ ಹಾಕಿ ಬಾಡಿಸಿ ಅದಕ್ಕೆ ಬೇಯಿಸಿದ ಹೆಸರುಬೇಳೆ, ನೀರು ಹಾಕಿ ನಂತರ ಸಾಂಬಾರ್ ಪುಡಿ ಹಾಕಿ ಬೇಯಿಸಿ ಉಪ್ಪು ಹಾಕಿದರೆ ರೆಡಿ ಕೊನೆಯಲ್ಲಿ ಕೊತ್ತಂಬರಿ ಹಾಕಿ

ಬೇಕಾಗುವ ಸಾಮಾನು:
ಇಡ್ಲಿ ಅಕ್ಕಿ-4ಲೋಟ
ಉದ್ದಿನಬೇಳೆ-1ಲೋಟ
ಉಪ್ಪು

ಮಾಡುವ ವಿಧಾನ:
1- ಅಕ್ಕಿ,ಉದ್ದಿನಬೇಳೆಯನ್ನು 4-5 ಗಂಟೆ ನೆನೆಸಿ ರುಬ್ಬಿಕೊಂಡು ಅದಕ್ಕೆಉಪ್ಪು ಸೇರಿಸಿ ಕಳಸಿ, 8 ಗಂಟೆಗಳ ಕಾಲ ಬಿಟ್ಟು ಆಮೇಲೆ ಇಡ್ಲಿ ಪಾತ್ರೆಯಲ್ಲಿ ಇಟ್ಟು ಹಬೆಯಲ್ಲಿ 5 ನಿಮಿಷ ಬೇಯಿಸಿದರೆ ಇಡ್ಲಿ ರೆಡಿ.

ಬೇಕಾಗುವ ಸಾಮಾಗ್ರಿಗಳು:
ಕುಂಬಳಕಾಯಿ-500ಗ್ರಾಂ
ಹಸಿಮೆಣಸಿನಕಾಯಿ-2
ಈರುಳ್ಳಿ-1
ಕಡಲೆಬೇಳೆ-2ಚಮಚ
ತೆಂಗಿನತುರಿ ಸ್ವಲ್ಪ
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿಸೊಪ್ಪು
ಉಪ್ಪು

ಮಾಡುವ ವಿಧಾನ:

1- ಕುಂಬಳಕಾಯಿ, ಈರುಳ್ಳಿ, ಮೆಣಸಿನಕಾಯಿಯನ್ನು ಚಿಕ್ಕದಾಗಿ ಹಚ್ಚಿಕೊಳ್ಳಿ.
2- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ,ಜೀರಿಗೆ,ಕಡಲೆಬೇಳೆ,ಈರುಳ್ಳಿ,ಮೆಣಸಿನಕಾಯಿ,ಕರಿಬೇವು
ಹಾಕಿ ಒಗ್ಗರಣೆ ಮಾಡಿ
3- ಕುಂಬಳಕಾಯಿಯನ್ನು ಹಾಕಿ 5 ನಿಮಿಷ ಬಾಡಿಸಿ
4- ನಂತರ ಉಪ್ಪು ಹಾಕಿ,ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ಕುಂಬಳಕಾಯಿ ಪಲ್ಯ ರೆಡಿ.

ಬೇಕಾಗುವ ಸಾಮಗ್ರಿಗಳು:
ಟೊಮೋಟ 2
ಈರುಳ್ಳಿ 1
ಕಡ್ಲೆ ಪುರಿ
ಮೆಣಸಿನಕಾಯಿ ಪೇಸ್ಟ್
ಕ್ಯಾರೆಟ್ 1
ಕಡಲೆಬೀಜ ಸ್ವಲ್ಪ
ಕೊತ್ತಂಬರಿ ಸೊಪ್ಪು
ಉಪ್ಪು

ಮಾಡುವ ವಿಧಾನ:
1 ಟೊಮೋಟವನ್ನು ರೌಂಡಾಗಿ ಕತ್ತರಿಸಿಕೊಳ್ಳಿ,ಈರುಳ್ಳಿ ಹಚ್ಚಿಕೊಳ್ಳಿ, ಕ್ಯಾರೆಟನ್ನು ತುರಿದುಕೊಳ್ಳಿ.
2 ಒಂದು ಪ್ಲೇಟಿನಲ್ಲಿ ಕತ್ತರಿಸಿದ ಟೊಮೋಟವನ್ನು ಜೋಡಿಸಿಕೊಳ್ಳಿ, ಅದರ ಮೇಲೆ ಮೆಣಸಿನಕಾಯಿ ಪೇಸ್ಟ್, ಕ್ಯಾರೆಟ್ ತುರಿ,ಈರುಳ್ಳಿ, ಕಡಲೆಬೀಜ, ಖಾರ, ಕಡ್ಲೆ ಪುರಿ, ಕೊತ್ತಂಬರಿಸೊಪ್ಪು ಹಾಕಿದರೆ ರೆಡಿ.

ಬೇಕಾಗುವ ಸಾಮಾಗ್ರಿ:
ದೋಸೆ ಹಿಟ್ಟು
ಎಣ್ಣೆ

ಮಾಡುವ ವಿಧಾನ:
ತಾವವನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ ದೋಸೆ ಹಿಟ್ಟು ಹಾಕಿ ಎರಡು ಕಡೆ ಬೇಯಿಸಿದರೆ ಸೆಟ್ ದೋಸೆ ರೆಡಿ.

ಬೇಕಾಗುವ ಸಾಮಾನು:
ಅಕ್ಕಿ-4ಲೋಟ
ಉದ್ದಿನಬೇಳೆ-1ಲೋಟ
ಉಪ್ಪು

ಮಾಡುವ ವಿಧಾನ:
1- ಅಕ್ಕಿ, ಉದ್ದಿನಬೇಳೆಯನ್ನು 5 ಗಂಟೆಗಳ ಕಾಲ ನೆನೆಸಿ ನಂತರ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ, ಆಮೇಲೆ ಉಪ್ಪು ಹಾಕಿ ಕಳಸಿ, 8 ಗಂಟೆ ಬಿಟ್ಟು ಅನಂತರ ದೋಸೆ ಮಾಡಬಹುದು.
2- ಒಂದು ತಾವವನ್ನೂ ಹಿಟ್ಟು ಕಾದ ನಂತರ ದೋಸೆ ಹಿಟ್ಟುನ್ನು ಹಾಕಿ, ಎರಡು ಕಡೆ ಬೇಯೆಸಿದರೆ ದೋಸೆ ರೆಡಿ.

Open Dosa
Open Benne Dosa

ಬೇಕಾಗುವ ಸಾಮಗ್ರಿಗಳು:
ದೋಸೆ ಹಿಟ್ಟು
ಆಲೂ ಪಲ್ಯ
ಬೆಣ್ಣೆ

ಮಾಡುವ ವಿಧಾನ
ತಾವವನ್ನು ಬಿಸಿ ಮಾಡಿ ದೋಸೆ ಹಿಟ್ಟು ಹಾಕಿ ಅದರ ಮೇಲೆ ಬೆಣ್ಣೆಯನ್ನು ಹಾಕಿ ನಂತರ ಆಲೂ ಪಲ್ಯವನ್ನು ಮದ್ಯದಲ್ಲಿ ಹಾಕಿ ಬೇಯಿಸಿದರೆ ಬೆಣ್ಣೆ ದೋಸೆ ರೆಡಿ

ಬೇಕಾಗುವ ಸಾಮಗ್ರಿಗಳು:
ದೋಸೆ ಹಿಟ್ಟು
ಚಟ್ನಿ ಪುಡಿ
ಬೆಣ್ಣೆ
ಅಲುಪಲ್ಯ

ಮಾಡುವ ವಿಧಾನ:
ಕಾದ ತವದ ಮೇಲೆ ಬೆಣ್ಣೆ ಹಾಕಿ ದೋಸೆ ಹಿಟ್ಟು ಹಾಕಿ ಅದರ ಮೇಲೆ ಚಟ್ನಿ .ಯನ್ನು ಉದುರಿಸಿ,ನಂತರ ಬೆಣ್ಣೆಯನ್ನು ಹಾಕಿ ಅಲುಪಲ್ಯ ಇಟ್ಟರೆ ಅದರ ಮೇಲೆ ಸ್ವಲ್ಪ ಬೆಣ್ಣೆ ಹಾಕಿದರೆ ಮಸಾಲೆ ಬೆಣ್ಣೆ ಓಪನ್ ದೋಸೆ ರೆಡಿ.

ಬೇಕಾಗುವ ಸಾಮಾನು:
ದೋಸೆ ಹಿಟ್ಟು
ಈರುಳ್ಳಿ-2
ಹಸಿಮೆಣಸಿನಕಾಯಿ-2
ಕೊತ್ತಂಬರಿಸೊಪ್ಪು
ಬೆಣ್ಣೆ ಸ್ವಲ್ಪ

ಮಾಡುವ ವಿಧಾನ:
1 ಈರುಳ್ಳಿ,ಮೆಣಸಿನಕಾಯಿ, ಕೊತ್ತನ್ಬರಿಸೊಪ್ಪುನ್ನು ಹಚ್ಚಿಕೊಳ್ಳಿ.
2 ತಾವವನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಸವರಿ ನಂತರ ದೋಸೆ ಹಿಟ್ಟು ಹಾಕಿ,ಆಮೇಲೆ ಈರುಳ್ಳಿ,ಮೆಣಸಿನಕಾಯಿ,ಕೊಟ್ತಂಬರಿಸೊಪ್ಪನ್ನುಮೇಲೆ ಹಾಕಿ ಅದರ ಮೇಲೆ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಎರಡು ಕಡೆ ಬೇಯಿಸಿದರೆ ಈರುಳ್ಳಿ ದೋಸೆ ರೆಡಿ.

ಬೇಕಾಗುವ ಸಾಮಾನು:

ದೋಸೆ ಹಿಟ್ಟು
ಆಲೂ ಪಲ್ಯ
ಕರದ ಚಟ್ನಿ
ಬೆಣ್ಣೆ

ಮಾಡುವ ವಿಧಾನ
ಬಿಸಿ ತವದ ಮೇಲೆ ಬೆಣ್ಣೆ ಸವರಿ ಅದಕ್ಕೆ ದೋಸೆ ಹಿಟ್ಟು ಹಾಕ್ ಅದರ ಮೇಲೆಖಾರದ ಚಟ್ನಿ ಸವರಿ ಅದರ ಮೇಲೆ ಅಲುಪಲ್ಯ ಹಿಟ್ಟು ಬೆಣ್ಣೆ ಹಾಕಿದರೆ ಮಸಾಲ ದೋಸೆ ತಿನ್ನಲು ರೆಡಿ.

ಬೇಕಾಗುವ ಸಾಮಗ್ರಿಗಳು:
ಮೊಸರು 1/2 ಲೀಟರ್
ಉದ್ದ ಬದನೆಕಾಯಿ 2
ಕೊತ್ತಂಬರಿಸೊಪ್ಪು
ಈರುಳ್ಳಿ 1
ಹಸಿಮೆಣಸಿನಕಾಯಿ 2
ಕರಿಮೆಣಸು ಸ್ವಲ್ಪ
ಉಪ್ಪು

ಮಾಡುವ ವಿಧಾನ:
1 ಬದನೆಕಾಯಿಯನ್ನು ಸುತ್ತಿಕೊಂಡು ಅದರ ಸಿಪ್ಪೆ ತೆಗೆದು ಬಿಡಿಸಿಕೊಳ್ಳಿ, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿಯನ್ನು ಹಚ್ಚಿಕೊಳ್ಳಿ, ಕರಿಮೆಣಸನ್ನು ಪುಡಿ ಮಾಡಿ.
2 ಮೊಸರು ಹಾಕಿ ಅದಕ್ಕೆ ಬದನೆ,ಈರುಳ್ಳಿ, ಮೆಣಸಿನಕಾಯಿ,ಕರಿಮೆಣಸು, ಕೊತ್ತಂಬರಿಸೊಪ್ಪು, ಉಪ್ಪು ಹಾಕಿ ಕಲಸಿದರೆ ಮೊಸರು ಬಜ್ಜಿ ಸಿದ್ದ.

Agala Kaayi Saagu
Agala Kaayi Saagu

ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ 1
ಈರುಳ್ಳಿ 1
ಹುಣಸೆಹಣ್ಣು ಸ್ವಲ್ಪ
ಸಾಂಬಾರ್ ಪುಡಿ 2 ಚಮಚ
ಅರಿಸಿನ ಸ್ವಲ್ಪ
ಬೆಲ್ಲ ಸ್ವಲ್ಪ
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1 ಹಾಗಲಕಾಯಿಯನ್ನು ಹಚ್ಚಿಕೊಂಡು ನೀರಿಗೆ ಸ್ವಲ್ಪ ಅರಿಸಿನ ಹಾಕಿ ನೆನೆಸಿ ಕಹಿ ಕಡಿಮೆಯಗುತ್ತದೆ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ,ಕಡಲೆಬೇಳೆ, ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ ನಂತರ ಹಾಗಲಕಾಯಿ ಹಾಕಿ ಬಾಡಿಸಿ,ಆಮೇಲೆ ಹುಣಸೆಹಣ್ಣಿನ ರಸ , ಸಾಂಬಾರ್ ಪುಡಿ ಸೇರಿಸಿ ಚೆನ್ನಾಗಿ ಬೇಯಿಸಿ ಅದಕ್ಕೆ ಉಪ್ಪು ಹಾಕಿ ಕೊನೆಯಲ್ಲಿ ಕೊತ್ತಂಬರಿ ಹಾಕಿದರೆ ರೆಡಿ.

ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು
ಈರುಳ್ಳಿ 1
ಕ್ಯಾರೆಟ್ 1
ಜೀರಿಗೆ
ಹಸಿಮೆಣಸಿನಕಾಯಿ 1
ಕೊತ್ತಂಬರಿಸೊಪ್ಪು
ಉಪ್ಪು
ಎಣ್ಣೆ

ಮಾಡುವ ವಿಧಾನ:
1 ಕ್ಯಾರೆಟನ್ನು ತುರಿದುಕೊಳ್ಳಿ, ಈರುಳ್ಳಿ,ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
2 ಅಕ್ಕಿಹಿಟ್ಟು, ಕ್ಯಾರೆಟ್ ತುರಿ, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಜೀರಿಗೆ, ಉಪ್ಪು ಹಾಕಿ ಬೆರೆಸಿ ನಂತರ ಅದಕ್ಕೆ ನೀರು ಹಾಕಿ ಕಲಸಿಕೊಂಡು ಉಂಡೆ ಮಾಡಿಕೊಳ್ಳಿ. ಒಂದು ಕವರ್ ತೆಗೆದುಕೊಂಡು ಸ್ವಲ್ಪ ಎಣ್ಣೆ ಸವರಿ ಅದರ ಮೇಲೆ ಉಂಡೆ ಇಟ್ಟು ತಟ್ಟಿಕೊಳ್ಳಿ.
3 ತವ ಬಿಸಿ ಮಾಡಿ ತಟ್ಟಿದನ್ನು ಹಾಕಿ ಎರಡು ಕಡೆ ಬೇಯಿಸಿದರೆ ಅಕ್ಕಿರೊಟ್ಟಿ ತಿನ್ನಲು ರೆಡಿ.

Alasande Kaalu Vade
Alasande Kaalu Vade

ಬೇಕಾಗುವ ಸಾಮಗ್ರಿಗಳು:
ಅಲಸಂದೆ ಕಾಳು 1 ಲೋಟ
ಹಸಿಮೆಣಸಿನಕಾಯಿ 2
ಒಣಮೆಣಸಿನಕಾಯಿ 3
ಜೀರಿಗೆ 1 ಚಮಚ
ಶುಂಠಿ- ಬೆಳ್ಳುಳ್ಳಿ
ಕರಿಬೇವು
ಕೊತ್ತಂಬರಿಸೊಪ್ಪು
ಕರಿಯಲು ಎಣ್ಣೆ
ಉಪ್ಪು

ಮಾಡುವ ವಿಧಾನ:
1 ಅಲಸಂದೆ ಕಾಲನ್ನು 3 ಗಂಟೆ ನೆನೆಸಿ, ತರಿತರಿಯಾಗಿ ರುಬ್ಬಿಕೊಳ್ಳಿ ಅದಕ್ಕೆ ಜೀರಿಗೆ, ಒಣಮೆಣಸಿನಕಾಯಿಯನ್ನು ಹಾಕಿ ರುಬ್ಬಿ. ಜೊತೆಯಲ್ಲಿ ಶುಂಠಿ ಬೆಳ್ಳುಳ್ಳಿ ಯನ್ನು ರುಬ್ಬಿ.
2 ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿರಿ.
3 ರುಬ್ಬಿದ ಮಿಶ್ರಣಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕರಿಬೇವು, ಉಪ್ಪು ಸೇರಿಸಿ ಕಲಸಿಕೊಳ್ಳಿ.
4 ಎಣ್ಣೆ ಕಾದ ನಂತರ ವಡೆಯ ರೀತಿಯಾಗಿ ಬೇಯಿಸಿದರೆ ವಡೆ ತಿನ್ನಲು ರೆಡಿ.

Avalakki Vegetable chitranna
Avalakki Vegetable chitranna

ಬೇಕಾಗುವ ಸಾಮಗ್ರಿಗಳು:
ಅವಲಕ್ಕಿ 1 ಲೋಟ
ಬೀನ್ಸ್ 2
ಕ್ಯಾರೆಟ್ 1 ಚಿಕ್ಕದ್ದು
ಈರುಳ್ಳಿ 1
ನಿಂಬೆ ಹಣ್ಣು 1
ಹಸಿಮೀಣಸಿನಕಾಯಿ 2
ಕಡಲೆಬೇಳೆ 1 ಚಮಚ
ಕಡಲೆಬೀಜ 1 ಚಮಚ
ಉಪ್ಪು
ಎಣ್ಣೆ
ಅರಿಸಿಣ

ಮಾಡುವ ವಿಧಾನ:
1 ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ. ಈರುಳ್ಳಿಯನ್ನು ಉದ್ದವಾಗಿ ಹಚ್ಚಿ ಮೆಣಸಿನಕಾಯಿನ್ನು ಹಚ್ಚಿ.
2 ಬೀನ್ಸ್, ಕ್ಯಾರೆಟನ್ನು ಹಚ್ಚಿ ಬೇಯಿಸಿಕೊಳ್ಳಿ.
3 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಈರುಳ್ಳಿ,ಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿ, ಅದಕ್ಕೆ ಬೇಯಿಸಿದ ತರಕಾರಿ ಹಾಕಿ ಸ್ವಲ್ಪ ಅರಿಸಿಣ, ಉಪ್ಪು ಹಾಕಿ ಬಾಡಿಸಿ ನಂತರ ನೆನೆಸಿದ ಅವಲಕ್ಕಿಯನ್ನು ಹಾಕಿ ಬಾಡಿಸಿಸುತ್ತಾ ಇರಿ. ಕೊನೆಯಲ್ಲಿ ನಿಂಬೆರಸ, ಕೊತ್ತಂಬರಿಸೊಪ್ಪು ಹಾಕಿದರೆ ಚಿತ್ರಾನ್ನ ರೆಡಿ
4 ಕಡಲೆಬೀಜವನ್ನು ಬೇರೆ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಉರಿದು ಸೇರಿಸಿ.

ಬೇಕಾಗುವ ಸಾಮಾಗ್ರಿಗಳು:
ಕುಂಬಳಕಾಯಿ-500ಗ್ರಾಂ
ಟಮೋಟ-2
ಸಾಂಬಾರ್ ಪುಡಿ-2
ಈರುಳ್ಳಿ-1
ಒಣಮೆಣಸಿನಕಾಯಿ
ಸಾಸಿವೆ
ಜೀರಿಗೆ
ಎಣ್ಣೆ
ತೆಂಗಿನತುರಿ ಸ್ವಲ್ಪ
ಉರಿಗಡಲೆ ಸ್ವಲ್ಪ
ಕಡಲೆಬೇಳೆ-2ಚಮಚ
ಕರಿಬೇವು
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1-ಕುಂಬಳಕಾಯಿ,ಈರುಳ್ಳಿ,ಟಮೋಟವನ್ನು ಚಿಕ್ಕದಾಗಿ ಹಚ್ಚಿಕೊಳ್ಳಿ.
2-ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಈರುಳ್ಳಿ, ಮೆಣಸಿನಕಾಯಿ,ಕರಿಬೇವು ಹಾಕಿ ಒಗ್ಗರಣೆ ಮಾಡಿ.
3- ಕುಂಬಳಕಾಯಿ ಹಾಕಿ ಬಾಡಿಸಿ ನಂತರ ನೀರು ಹಾಕಿ, ಆಮೇಲೆ ಸಾಂಬಾರ್ ಪುಡಿ ಹಾಕಿ ಬೇಯಿಸಿ .
4-ಬೆಂದ ನಂತರ ತಮೋಟವನ್ನು ಹಾಕಿ.
5-ತೆಂಗಿನತುರಿ ಮತ್ತು ಉರಿಗಡಲೆಯನ್ನು ರುಬ್ಬಿಕೊಂಡು ಬಾಣಲೆಗೆ ಹಾಕಿ ಬಾಡಿಸಿ ನಂತರ ಉಪ್ಪು ಹಾಕಿ ಬೇಯಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ಕುಂಬಳಕಾಯಿ ಸಾಗು ರೆಡಿ.

ಬೇಕಾಗುವ ಸಾಮಾನುಗಳು:
ಮಜ್ಜಿಗೆ
ಈರುಳ್ಳಿ 2
ಬೆಳ್ಳುಳ್ಳಿ 6 ಎಸಳು
ಒಣಮೆಣಸಿನಕಾಯಿ 4
ಕೊತ್ತಂಬರಿ ಬೀಜ 2 ಚಮಚ
ಅರಿಸಿನದ ಕೋಬು ಸ್ವಲ್ಪ
ಜೀರಿಗೆ 1 ಚಮಚ
ತೆಂಗಿನತುರಿ ಸ್ವಲ್ಪ
ಉರಿಗಡಲೆ ಸ್ವಲ್ಪ
ಸಾಸಿವೆ
ಕರಿಬೇವು
ಕೊತ್ತಂಬರಿಸೊಪ್ಪು
ಸಾಂಬಾರ್ ಪುಡಿ

ಮಾಡುವ ವಿಧಾನ:
1 ಈರುಳ್ಳಿ, ಬೆಳ್ಳುಳ್ಳಿ, ಒಣಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಬೀಜ, ಅರಿಸಿನದ ಕೊಬ್ಬು, ಜೀರಿಗೆ, ಕಾಯಿತುರಿ, ಉರಿಗಡಲೆ, ಮಜ್ಜಿಗೆ ಹಾಕಿ ರುಬ್ಬಿಕೊಳ್ಳಿ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಈರುಳ್ಳಿ, ಒನ್ಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿ ನಂತರ ರುಬ್ಬಿದ್ದನ್ನು ಹಾಕಿ ಅದಕ್ಕೆ ಮಜ್ಜಿಗೆ ಸೇರಿಸಬೇಕು. ಆಮೇಲೆ 2 ಚಮಚ ಸಾಂಬಾರ್ ಪುಡಿ ಹಾಕಿ ಬೇಯಿಸಿ, ನಂತರ ಉಪ್ಪು ಸೇರಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ಸಾಂಬಾರ್ ರೆಡಿ.

ಬೇಕಾಗುವ ಸಾಮಾಗ್ರಿಗಳು:
ಅನ್ನ-1ಕಪ್
ಮೊಸರು-1/2 ಲೀಟರ್
ದ್ರಾಕ್ಷಿ
ಈರುಳ್ಳಿ-1
ಕಡಲೆಬೇಳೆ-2ಚಮಚ
ಹಸಿಮೆಣಸಿನಕಾಯಿ
ಕೊತ್ತಂಬರಿಸೊಪ್ಪು
ಉಪ್ಪು
ಎಣ್ಣೆ
ಸಾಸಿವೆ
ಜೀರಿಗೆ
ಮಾಡುವ ವಿಧಾನ
1 ಈರುಳ್ಳಿ,ಮೆಣಸಿನಕಾಯಿ ಹಚ್ಚಿಕೊಳ್ಳಿ
2 ಎಣ್ಣೆ, ಸಾಸಿವೆ, ಜೀರಿಗ್, ಕಡಲೆಬೇಳೆಯನ್ನು ಹಾಕಿಒಗ್ಗರಣೆ ಮಾಡಿರಿ
3 ಒಂದು ಪಾತ್ರೆಯಲ್ಲಿ ಅನ್ನ,ದ್ರಾಕ್ಷಿ, ದಾಳಿಂಬೆ,ಈರುಳ್ಳಿ, ಮೆಣಸಿನಕಾಯಿ,ಕೊತ್ತಂಬರಿಸೊಪ್ಪು, ಮೊಸರು,ಉಪ್ಪು ಹಾಕಿ ಕಲಸಿದರೆ ಮೊಸರನ್ನ ರೆಡಿ.

Nugge Kaayi Sambar
Nugge Kaayi Sambar

ಬೇಕಾಗುವ ಸಾಮಗ್ರಿಗಳು:
ನುಗ್ಗೆಕಾಯಿ 3
ತೊಗರಿಬೇಳೆ 1 ಬೌಲ್
ಟೊಮೋಟ 2
ಈರುಳ್ಳಿ 1
ಸಾಂಬಾರ್ ಪುಡಿ 3 ಚಮಚ
ಬೆಳ್ಳುಳ್ಳಿ 4 ಎಸಳು
ಸಾಸಿವೆ
ಕರಿಬೇವು
ಕೊತ್ತಂಬರಿಸೊಪ್ಪು
ಉಪ್ಪು
ಎಣ್ಣೆ

ಮಾಡುವ ವಿಧಾನ:
1 ನುಗ್ಗೆಕಾಯಿ, ಈರುಳ್ಳಿ, ಟೊಮೋಟವನ್ನು ಹಚ್ಚಿಕೊಳ್ಳಿ.
ಒಂದು ಕುಕ್ಕರ್‌ನಲ್ಲಿ ತೊಗರಿಬೇಳೆ, ನುಗ್ಗೆಕಾಯಿ,ಈರುಳ್ಳಿ,ಟೊಮೋಟ, ಉಪ್ಪು, ಸಾಂಬಾರ್ ಪುಡಿ ಹಾಕಿ 3 ವಿಷಲ್ ಕೂಗಿಸಿ.
2 ಒಂದು ಚಿಕ್ಕ ಪಾತ್ರೆಯಲ್ಲಿ ಎಣ್ಣೆ, ಸಾಸಿವೆ,ಜಜ್ಜಿದ ಬೆಳ್ಳುಳ್ಳಿ,ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಹಾಕಿದರೆ ಸಾಂಬಾರ್ ಸಿದ್ದ.

ಬೇಕಾಗುವ ಸಾಮಗ್ರಿಗಳು:
ಬೀನ್ಸ್ 5
ಕ್ಯಾರೆಟ್ 1
ಹಸಿಬಟಾಣಿ ಸ್ವಲ್ಪ
ಈರುಳ್ಳಿ 1
ಆಲೂಗೆಡ್ಡೆ 1
ಟೊಮೋಟ 2
ಅಕ್ಕಿ 3 ಲೋಟ
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 5 ಎಸಳು
ತೆಂಗಿನತುರಿ ಸ್ವಲ್ಪ
ಚಕ್ಕೆ 1
ಲವಂಗ 3
ಮೊಗ್ಗು 2
ಪಲಾವ್ ಎಲೆ 2
ಮೆಣಸಿನಪುಡಿ 1 ಚಮಚ
ಕೊತ್ತಂಬರಿ ಪುಡಿ 2 ಚಮಚ
ತರ ಮಸಾಲಾ 1 ಚಮಚ
ಉಪ್ಪು
ಎಣ್ಣೆ 3 ಚಮಚ
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿಸೊಪ್ಪು
ಕಡಲೆಬೇಳೆ 1 ಚಮಚ

ಮಾಡುವ ವಿಧಾನ:
1 ಬೀನ್ಸ್, ಕ್ಯಾರೆಟ್, ಟೊಮೋಟ, ಆಲೂಗೆಡ್ಡೆ, ಈರುಳ್ಳಿಯನ್ನು ಹಚ್ಚಿಕೊಳ್ಳಿ.
2 ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿಯನ್ನು ರುಬ್ಬಿಕೊಳ್ಳಿ.
3 ಒಂದು ಕುಕ್ಕರ್‌ಗೆ ಎಣ್ಣೆ ,ಸಾಸಿವೆ, ಜೀರಿಗೆ,ಚಕ್ಕೆ, ಲವಂಗ,ಮೊಗ್ಗು, ಪಲಾವ್ ಎಲೆ, ಕಡಲೆಬೇಳೆ, ಈರುಳ್ಳಿ, ಕರಿಬೇವು ಹಾಕಿ ಬಾಡಿಸಿಕೊಳ್ಳಿ, ಆದಕ್ಕೆ ತರಕಾರಿಗಳನ್ನು ಹಾಕಿ ಬಾಡಿಸಿ, ರುಬ್ಬಿದ ಮಿಶ್ರಣವನ್ನು ಹಸಿ ವಾಸನೆ ಹೋಗುವವರೆಗೆ ಬಾಡಿಸಿ, ಆಮೇಲೆ ಅಕ್ಕಿ, ನೀರು 1:2 ರಂತೆ ಹಾಕಿ ನಂತರ ಚಿಲ್ಲಿ ಪುಡಿ, ಕೊತ್ತಂಬರಿಪುಡಿ, ಗರಂ  ಮಸಾಲಾ  ಉಪ್ಪು ಹಾಕಿ ಕೂಡಿ ಬಂದ ನಂತರ ಕುಕ್ಕರ್ ಮುಚ್ಚಿ 3 ವಿಷಲ್ ಕೂಗಿಸಿ. ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ಪಲಾವ್ ಸಿದ್ದ.

ಬೇಕಾಗುವ ಸಾಮಗ್ರಿಗಳು:
ಮೊಸರು 1/2 ಲೀಟರ್
ಈರುಳ್ಳಿ 1
ಟೊಮೋಟ 1
ಸೌತೆಕಾಯಿ 1/2
ಕೊತ್ತಂಬರಿಸೊಪ್ಪು
ಹಸಿಮೆಣಸಿನಕಾಯಿ 2

ಮಾಡುವ ವಿಧಾನ:
1 ಈರುಳ್ಳಿ, ಟೊಮೋಟ. ಸೌತೆಕಾಯಿ, ಹಸಿಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
2 ಒಂದು ಪಾತ್ರೆಗೆ ಮೊಸರು, ಈರುಳ್ಳಿ, ಟೊಮೋಟ, ಸೌತೆಕಾಯಿ, ಮೆಣಸಿನಕಾಯಿ,ಕೊತ್ತಂಬರಿಸೊಪ್ಪು, ಉಪ್ಪು  ಎಲ್ಲವನ್ನು ಹಾಕಿ ಕಲಸಿದರೆ ರೆಡಿ.

ಬೇಕಾಗುವ ಸಾಮಗ್ರಿಗಳು:
ತೊಂಡೆಕಾಯಿ
ಈರುಳ್ಳಿ 1
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಮೆಣಸಿನಕಾಯಿ 2
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1 ತೊಂಡೆಕಾಯಿ, ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
2 ತೊಂಡೆಕಾಯಿಯನ್ನು ಬೇಯಿಸಿಕೊಳ್ಳಿ.
3 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ,ಈರುಳ್ಳಿ,ಕರಿಬೇವು,ಮೆಣಸಿನಕಾಯಿಯನ್ನು ಬಾಡಿಸಿ
ನಂತರ ಬೇಯಿಸಿದ ತೊಂಡೆಕಾಯಿಯನ್ನು ಹಾಕಿ ಬಾಡಿಸಿ
ಉಪ್ಪು, ಕೊತ್ತಂಬರಿಸೊಪ್ಪು ಹಾಕಿದರೆ ರೆಡಿ.

Avarekaayi Uppittu
Avarekaayi Uppittu

ಬೇಕಾಗುವ ಸಾಮಗ್ರಿಗಳು:
ಬನ್ಸಿ ರವೆ 1 ಕಪ್
ಟೊಮೋಟ 2
ಅವರೆಕಾಯಿ 1 ಚಿಕ್ಕ ಬೋಲ್
ಬೀನ್ಸ್ 4
ಕ್ಯಾರೆಟ್ 1
ಬಟಾಣಿ ಸ್ವಲ್ಪ
ಈರುಳ್ಳಿ 2
ಎಣ್ಣೆ 4 ಚಮಚ
ಮೆಣಸಿನಕಾಯಿ 2
ಕರಿಬೇವು
ಸಾಸಿವೆ
ಜೀರಿಗೆ
ನಿಂಬೆ ಹಣ್ಣು 1
ಕಡಲೆಬೇಳೆ 2 ಚಮಚ
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1 ರವೆಯನ್ನು ಉರಿದುಕೊಳ್ಳಿ, ಬೀನ್ಸ್, ಕ್ಯಾರೆಟ್, ಟೊಮೋಟ, ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ. ಹಚ್ಚಿದ ಬೀನ್ಸ್, ಕ್ಯಾರೆಟ್, ಅವರೆಕಾಯಿ, ಬಟಾಣಿಯನ್ನು ಬೇಯಿಸಿಕೊಳ್ಳಿ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಈರುಳ್ಳಿ,ಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿ, ನಂತರ ಟೊಮೋಟವನ್ನು ಹಾಕಿ ಬಾಡಿಸಿ ಅದಕ್ಕೆ ಬೇಯಿಸಿದ ತರಕಾರಿಯನ್ನು ಹಾಗೂ ನೀರು 1:2 ಹಾಕಿ ಕುದಿಸಿ, ಕುದಿ ಬಂದ ಮೇಲೆ ಉಪ್ಪು ಹಾಕಿ ಕುದಿಸಿ ನಂತರ ರವೆಯನ್ನು ಸ್ವಲ್ಪ ಸ್ವಲ್ಪ ಹಾಕಿ ಬಾಡಿಸಿದರೆ ಉಪ್ಪಿಟ್ಟು ರೆಡಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಮತ್ತು ನಿಂಬೆ ರಸ ಹಾಕಿದರೆ ಸಿದ್ದ.

ಬೇಕಾಗುವ ಸಾಮಗ್ರಿಗಳು:
ರವೆ 1 ಕಪ್
ಟೊಮೋಟ 2
ಬೀನ್ಸ್ 4
ಕ್ಯಾರೆಟ್ 1
ಬಟಾಣಿ ಸ್ವಲ್ಪ
ಈರುಳ್ಳಿ 2
ಎಣ್ಣೆ 4 ಚಮಚ
ಮೆಣಸಿನಕಾಯಿ 2
ಕರಿಬೇವು
ಸಾಸಿವೆ
ಜೀರಿಗೆ
ನಿಂಬೆ ಹಣ್ಣು 1
ಕಡಲೆಬೇಳೆ 2 ಚಮಚ
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
1 ರವೆಯನ್ನು ಉರಿದುಕೊಳ್ಳಿ, ಬೀನ್ಸ್, ಕ್ಯಾರೆಟ್, ಟೊಮೋಟ, ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ. ಹಚ್ಚಿದ ಬೀನ್ಸ್, ಕ್ಯಾರೆಟ್, ಬಟಾಣಿಯನ್ನು ಬೇಯಿಸಿಕೊಳ್ಳಿ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಈರುಳ್ಳಿ,ಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿ, ನಂತರ ಟೊಮೋಟವನ್ನು ಹಾಕಿ ಬಾಡಿಸಿ ಅದಕ್ಕೆ ಬೇಯಿಸಿದ ತರಕಾರಿಯನ್ನು ಹಾಗೂ ನೀರು 1:2 ಹಾಕಿ ಕುದಿಸಿ, ಕುದಿ ಬಂದ ಮೇಲೆ ಉಪ್ಪು ಹಾಕಿ ಕುದಿಸಿ ನಂತರ ರವೆಯನ್ನು ಸ್ವಲ್ಪ ಸ್ವಲ್ಪ ಹಾಕಿ ಬಾಡಿಸಿದರೆ ಉಪ್ಪಿಟ್ಟು ರೆಡಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಮತ್ತು ನಿಂಬೆ ರಸ ಹಾಕಿದರೆ ಸಿದ್ದ.

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ 1 ಲೋಟ
ಅಕ್ಕಿ 2 ಲೋಟ
ಬೆಲ್ಲ ಅಧವಾ ಸಕ್ಕರೆ ಸಿಹಿಗೆ ಬೇಕಾದಷ್ಟು
ಎಲ್ಲಕ್ಕಿ 2
ತೆಂಗಿನ ತುರಿ ಸ್ವಲ್ಪ

ಮಾಡುವ ವಿಧಾನ:
1 ಅಕ್ಕಿ,ಹೆಸರುಬೇಳೆಯನ್ನು ಕುಕ್ಕರ್‌ನಲ್ಲಿ 3 ವಿಷಲ್ ಕೂಗಿಸಿ (1:4 ನೀರು).
2 ಅದಕ್ಕೆ ಬೆಲ್ಲ or ಸಕ್ಕರೆ,ಎಲ್ಲಕ್ಕಿ ಸೇರಿಸಿ ಬಡಿಸಿದರೆ ಸಿಹಿ ಪೊಂಗಲ್ ರೆಡಿ.

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ 1 ಲೋಟ
ಅಕ್ಕಿ 2 ಲೋಟ
ಅರಿಸಿಣ ಸ್ವಲ್ಪ
ತೆಂಗಿನ ತುರಿ ಸ್ವಲ್ಪ
ಬೆಳ್ಳುಳ್ಳಿ 6 ಎಸಳು
ಹಸಿಮೆಣಸಿನಕಾಯಿ 2/3
ಸಾಸಿವೆ
ಜೀರಿಗೆ
ಕರಿಮೆಣಸು ಸ್ವಲ್ಪ
ಕರಿಬೇವು
ಕೊತ್ತಂಬರಿಸೊಪ್ಪು
ಎಣ್ಣೆ
ಉಪ್ಪು
ಒಣಮೆಣಸಿನಕಾಯಿ 2

ಮಾಡುವ ವಿಧಾನ:
1 ಕುಕ್ಕರ್‌ಗೆ ಹೆಸರುಬೇಳೆ, ಅಕ್ಕಿ,ಅರಿಸಿಣ ಹಾಕಿ 3 ವಿಷಲ್ ಕೂಗಿಸಿ.
2 ತೆಂಗಿನತುರಿ, ಹಸಿಮೆಣಸಿನಕಾಯಿಯನ್ನು ರುಬ್ಬಿಕೊಳ್ಳಿ.
3 ಏರ್ ಇಳಿದ ನಂತರ ರುಬ್ಬಿದನ್ನು ಮಿಶ್ರಣವನ್ನು ಹಾಗೂ ಉಪ್ಪು ಹಾಕಿ ಕುದಿಸಿ.
4 ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕರಿಮೆಣಸು, ಜಜ್ಜಿದ ಬೆಳ್ಳುಳ್ಳಿ,ಒಣಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಹಾಕಿದರೆ ಪೊಂಗಲ್ ಸಿದ್ದ.

ಬೇಕಾಗುವ ಸಾಮಗ್ರಿಗಳು:
ಹೀರೇಕಾಯಿ 2
ಈರುಳ್ಳಿ 1
ಟೊಮೋಟ 2
ಕಡಲೆಬೇಳೆ 2 ಚಮಚ
ಸಾಸಿವೆ
ಜೀರಿಗೆ
ಎಣ್ಣೆ
ಉಪ್ಪು
ತೆಂಗಿನತುರಿ ಸ್ವಲ್ಪ
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 5 ಎಸಳು
ಮೆಣಸಿನಪುಡಿ 1 ಚಮಚ
ಕೊತ್ತಂಬರಿಪುಡಿ 2 ಚಮಚ
ಗರಂ ಮಸಾಲಾ 1 ಚಮಚ

ಮಾಡುವ ವಿಧಾನ:
1 ಹೀರೇಕಾಯಿ,ಈರುಳ್ಳಿ,ಟೊಮೋಟವನ್ನು ಹಚ್ಚಿಕೊಳ್ಳಬೇಕು.
2 ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿಯನ್ನು ರುಬ್ಬಿಕೊಳ್ಳಿ.
3 ಒಂದು ಬಾಣಲೆಗೆ ಎಣ್ಣೆ,ಸಾಸಿವೆ, ಜೀರಿಗೆ, ಈರುಳ್ಳಿ, ಕರಿಬೇವು ಇದನ್ನು ಬಾಡಿಸಿಕೊಳ್ಳಿ,ನಂತರ ಅದಕ್ಕೆ ಹೀರೇಕಾಯಿ ಹಾಕಿ ಬಾಡಿಸಿ ನೀರು ಹಾಕಿ ಆಮೇಲೆ ಮೆಣಸಿನಪುಡಿ, ಕೊತ್ತಂಬರಿಪುಡಿ, ಗರಂ ಮಸಲವನ್ನು ಹಾಕಿ ಬೆಂದ ನಂತರ ಟೊಮೋಟ, ರುಬ್ಬಿದನ್ನು ಹಾಕಿ ಬಾಡಿಸಿ ಉಪ್ಪು ಹಾಕಿ ಬೇಯಿಸಿದರೆ ಹೀರೇಕಾಯಿ ಸಾಗು ರೆಡಿ.

ಬೇಕಾಗುವ ಸಾಮಗ್ರಿಗಳು:
ತೆಂಗಿನತುರಿ 1
ಉರಿಗಡಲೆ ಸ್ವಲ್ಪ
ಮೆಣಸಿನಕಾಯಿ 2
ಕೊತ್ತಂಬರಿಸೊಪ್ಪು
ಬೆಳ್ಳುಳ್ಳಿ 6 ಎಸಳು
ಹುಣಸೆಹಣ್ಣು ಸ್ವಲ್ಪ
ಉಪ್ಪು
ಎಣ್ಣೆ,
ಸಾಸಿವೆ

ಮಾಡುವ ವಿಧಾನ:
ತೆಂಗಿನತುರಿ,ಉರಿಗಡಲೆ, ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆಹಣ್ಣು, ಉಪ್ಪು, ಕೊತ್ತಂಬರಿಸೊಪ್ಪು ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಹಾಕಿ

ಬೇಕಾಗುವ ಸಾಮಗ್ರಿಗಳು:
ಬೀಟ್‌ರೂಟ್-2
ಈರುಳ್ಳಿ-1
ಹಸಿಮೆಣಸಿನಕಾಯಿ-2
ಕಡಲೆಬೇಳೆ-2 ಚಮಚ
ಕರಿಬೇವು
ಕೊತ್ತಂಬರಿಸೊಪ್ಪು
ಎಣ್ಣೆ
ಸಾಸಿವೆ
ಉಪ್ಪು

ಮಾಡುವ ವಿಧಾನ:
1 ಬೀಟ್‌ರೂಟನ್ನು ಸಿಪ್ಪೆ ತೆಗೆದು ತುರಿದುಕೊಳ್ಳಿ, ಈರುಳ್ಳಿ,ಮೆಣಸಿನಕಾಯಿಯನ್ನು ಹೆಚ್ಚಿಕೊಳ್ಳಿ
2 ಒಂದು ಬಾಣಲೆಗೆ ಎಣ್ಣೆ,ಸಾಸಿವೆ,ಈರುಳ್ಳಿ,ಕಡಲೆಬೇಳೆ, ಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ನಂತರ ತುರಿದ ಬೆಟ್‌ರೂಟ್ ಹಾಕಿ ಬಾಡಿಸಿ ಆಮೇಲೆ ಉಪ್ಪು ಸೇರಿಸಿ ಬಡಿಸಿದರೆ ರೆಡಿ ಕೊನೆಯಲ್ಲಿ ಕೊತ್ತಂಬರಿ ಹಾಕಿದರೆ ರೆಡಿ.

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ 3
ಕಡಲೆಹಿಟ್ಟು
ಅಕ್ಕಿಹಿಟ್ಟು 2 ಚಮಚ
ಜೀರಿಗೆ ಸ್ವಲ್ಪ
ಮೆಣಸಿನಪುಡಿ ಸ್ವಲ್ಪ
ಹಸಿಮೆಣಸಿನಕಾಯಿ 1
ಕೊತ್ತಂಬರಿಸೊಪ್ಪು
ಉಪ್ಪು
ಕರಿಯಲು ಎಣ್ಣೆ
ಸೋಡಾ ಸ್ವಲ್ಪ

ಮಾಡುವ ವಿಧಾನ:
1 ಈರುಳ್ಳಿಯನ್ನು ಉದ್ದವಾಗಿ ಹಚ್ಚಿಕೊಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
2 ಕಡಲೆಹಿಟ್ಟು, ಅಕ್ಕಿಹಿಟ್ಟು, ಜೀರಿಗೆ, ಮೆಣಸಿನಪುಡಿ, ಸೋಡಾ,ಕೊತ್ತಂಬರಿಸೊಪ್ಪು,ಈರುಳ್ಳಿ ಉಪ್ಪುನ್ಣು ಹಾಕಿ ಕಲಸಿಕೊಳ್ಳಿ.
3 ಎಣ್ಣೆ ಕಾಯಿಸಿಕೊಂಡು ಅದಕ್ಕೆ ತಯಾರಿಸಿದ ವಿಶ್ರಣವನ್ನು ಉಂಡೆ ರೀತಿ ಹಾಕಿ ಎಣ್ಣೆಯಲ್ಲಿ ಕರಿದರೆ ಬೋಂಡಾ ರೆಡಿ.

ಬೇಕಾಗುವ ಸಾಮಗ್ರಿಗಳು:
ಅನ್ನ – 1 ಕಪ್
ಪುಳಿಯೋಗರೆ -50 ಗ್ರಾಂ
ಬೆಳ್ಳುಳ್ಳೀ – 6 ಎಸಳು
ಈರುಳ್ಳಿ -1
ಕಡಲೆಬೇಳೆ -1 ಚಮಚ
ಕಡಲೆಬೀಜ -2 ಚಮಚ
ಒಣಮೆಣಸಿನಕಾಯಿ -2
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿಸೊಪ್ಪು

ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆ ,ಸಾಸಿವೆ,ಜೀರಿಗೆ,ಕಡಲೆಬೇಳೆ, ಕಡಲೆಬೀಜ,ಈರುಳ್ಳಿ, ಬೆಳ್ಳುಳ್ಳಿ,ಮೆಣಸಿನಕಾಯಿ,ಕರಿಬೇವು ಹಾಕಿ ಒಗ್ಗರಣೆ ಮಾಡಿ ನಂತರ ಅದಕ್ಕೆ ಪುಳಿಯೋಗರೆ ಪುಡಿ ಉಪ್ಪು ಹಾಕಿ ಮಿಕ್ಸ್ ಮಾಡಿ, ಅನ್ನ ಹಾಕಿ ಮಿಶ್ರಣ ಮಾಡಿದರೆ ಪುಳಿಯೋಗರೆ ರೆಡಿ.

ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 1 ಲೋಟ
ಅವರೆಕಾಯಿ 1/2 ಲೋಟ
ಅಕ್ಕಿ 2 ಲೋಟ
ಬೀನ್ಸ್ 5
ಕ್ಯಾರೆಟ್ 1
ಆಲೂಗೆಡ್ಡೆ 1
ಹಸಿಬಟಾಣಿ ಸ್ವಲ್ಪ
ಈರುಳ್ಳಿ 1
ಬಿಸಿಬೇಳೆ ಬಾತ್ ಪುಡಿ 3 ಚಮಚ
ಟೊಮೋಟ 2
ಬೀಟ್‌ರೂಟ್ 1
ತೆಂಗಿನತುರಿ ಸ್ವಲ್ಪ
ಸಾಸಿವೆ
ಒಣಮೆಣಸಿನಕಾಯಿ 2

ಮಾಡುವ ವಿಧಾನ:
1 ಎಲ್ಲ ತರಕಾರಿಗಳನ್ನು ಹಚ್ಚಿಕೊಳ್ಳಿ, ಈರುಳ್ಳಿ, ಟೊಮೋಟವನ್ನು ಹಚ್ಚಿಕೊಳ್ಳಿ
2 ಒಂದು ಕುಕ್ಕರ್‌ಗೆ ಎಣ್ಣೆ, ಸಾಸಿವೆ,ಈರುಳ್ಳಿ,ಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿಅದಕ್ಕೆ ಅಕ್ಕಿ,ಅವರೆಕಾಳು, ತೊಗರಿಬೇಳೆ, ಹಚ್ಚಿದ ತರಕಾರಿ, ಟೊಮೋಟವನ್ನು ಬಾಡಿಸಿ ಅದಕ್ಕೆ ನೀರು ಹಾಕಿ (1:4). ನಂತರ ಬಿಸಿಬೇಳೆ ಬಾತ್ ಪುಡಿಯನ್ನು ಹಾಕಿ ಕುಕ್ಕರ್‌ನಲ್ಲಿ 3 ವಿಷಲ್ ಕೂಗಿಸಿದರೆ ಬಿಸಿಬೇಳೆ ಬಾತ್ ರೆಡಿ.

ಬೇಕಾಗುವ ಸಾಮಗ್ರಿಗಳು:
ಅವರೆಕಾಯಿ 1 ಬೋಲ್
ಬೀನ್ಸ್ 5
ಕ್ಯಾರೆಟ್ 1
ಈರುಳ್ಳಿ 1
ತೆಂಗಿನತುರಿ ಸ್ವಲ್ಪ
ಉರಿಗಡಲೆ ಸ್ವಲ್ಪ
ಸಾಂಬಾರ್ ಪುಡಿ 3 ಚಮಚ
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿಸೊಪ್ಪು
ಎಣ್ಣೆ
ಉಪ್ಪು
ಹುಣಸೆಹಣ್ಣು ರಸ ರುಚಿಗೆ

ಮಾಡುವ ವಿಧಾನ:
1 ಬೀನ್ಸ್, ಕ್ಯಾರೆಟ್, ಈರುಳ್ಳಿಯನ್ನು ಹಚ್ಚಿಕೊಳ್ಳಿ, ಅವರೆಕಾಯಿಯನ್ನು ಬಿಡಿಸಿ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಈರುಳ್ಳಿ, ಕರಿಬೇವು, ಮೆಣಸಿನಕಾಯಿ ಹಾಕಿ ಬಾಡಿಸಿ.
3 ನಂತರ ಅದಕ್ಕೆ ಅವರೆಕಾಯಿ, ಬೀನ್ಸ್, ಕ್ಯಾರೆಟ್‌ನ್ನು ಹಾಕಿ ಬಾಡಿಸಿ ನೀರು ಹಾಕಿ ಆಮೇಲೆ ಸಾಂಬಾರ್ ಪುಡಿ ಹಾಕಿ 15 ನಿಮಿಷ ಬೇಯಿಸಿ ನಂತರ ಹುಣಸೆಹಣ್ಣಿನ ರಸ ಉಪ್ಪು ಹಾಕಿ ಬೇಯಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿದರೆ ರೆಡಿ.

ಬೇಕಾಗುವ ಸಾಮಗ್ರಿಗಳು:
ಹಸಿ ತೊಗರಿಕಾಳು 1 ಬೋಲ್
ಈರುಳ್ಳಿ 1
ತೆಂಗಿನ ತುರಿ ಸ್ವಲ್ಪ
ಉರಿಗಡಲೆ ಸ್ವಲ್ಪ
ಕರಿಬೇವು
ಸಾಸಿವೆ
ಟೊಮೋಟ 2
ಸಾಂಬಾರ್ ಪುಡಿ 3 ಚಮಚ
ಒಣಮೆಣಸಿನಕಾಯಿ 2
ಕೊತ್ತಂಬರಿಸೊಪ್ಪು
ಎಣ್ಣೆ
ಉಪ್ಪು

ಮಾಡುವ ವಿಧಾನ:
1 ಈರುಳ್ಳಿ, ಟೊಮೋಟ ಹಚ್ಚಿಕೊಳ್ಳಿ.
2 ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಈರುಳ್ಳಿ, ಕರಿಬೇವು, ಮೆಣಸಿನಕಾಯಿ ಹಾಕಿ ಬಾಡಿಸಿ ನಂತರ ಹಸಿ ತೊಗರಿ ಕಾಳು, ಟೊಮೋಟ ಹಾಕಿ ಬಾಡಿಸಿ ಅದಕ್ಕೆ ನೀರು,
ಸಾಂಬಾರ್ ಪುಡಿ ಹಾಕಿ 15 ನಿಮಿಷ ಬೇಯಿಸಿ ಆಮೇಲೆ ಉಪ್ಪು ಸೇರಿಸಿ ಕೊನೆಯಲ್ಲಿ ಕೊತ್ತಂಬರಿಸೊಪ್ಪು ಹಾಕಿ ಸಾಂಬಾರ್ ರೆಡಿ.

Heerekaayi Sambar
Heerekaayi Sambar

ಬೇಕಾಗುವ ಸಾಮಗ್ರಿಗಳು:
ಹೀರೇಕಾಯಿ 1
ತೊಗರಿಕಾಳು 1 ಚಿಕ್ಕ ಲೋಟ
ಹುಣಸೆಹಣ್ಣು ರುಚ್ಚಿಗೆ
ಈರುಳ್ಳಿ 1
ಎಣ್ಣೆ 2 ಚಮಚ
ಸಾಸಿವೆ
ತೆಂಗಿನತುರಿ ಸ್ವಲ್ಪ
ಉರಿಗಡಲೆ ಸ್ವಲ್ಪ
ಸಾಂಬಾರ್ ಪುಡಿ 3 ಚಮಚ
ಬೆಳ್ಳುಳ್ಳಿ 5 ಎಸಳು
ಕೊತ್ತಂಬರಿಸೊಪ್ಪು
ಉಪ್ಪು

ಮಾಡುವ ವಿಧಾನ:
1 ಹೀರೇಕಾಯಿ, ಈರುಳ್ಳಿಯನ್ನು ಹಚ್ಚಿಕೊಳ್ಳಿ.
2 ಒಂದು ಕುಕ್ಕರ್‌ಗೆ ಹೀರೇಕಾಯಿ, ಹುಣಸೆಹಣ್ಣಿನ ರಸ, ಈರುಳ್ಳಿ, ತೊಗರಿಬೇಳೆ, ಸಾಂಬಾರ್ ಪುಡಿ ನೀರು2 ಲೋಟ ಹಾಕಿ ಉಪ್ಪು ಹಾಕಿ 3 ವಿಷಲ್ ಕೂಗಿಸಿ.
3 ಒಂದು ಚಿಕ್ಕ ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಕುಕ್ಕರ್‌ಗೆ ಹಾಕಿ ಜೊತೆಗೆ ಕೊತ್ತಂಬರಿಸೊಪ್ಪು ಹಾಕಿದರೆ ಸಾಂಬಾರ್ ರೆಡಿ.

ಬೇಕಾಗುವ ಸಾಮಗ್ರಿಗಳು:
ಬೀನ್ಸ್ 6
ಕ್ಯಾರೆಟ್ 2
ಟೊಮೋಟ 2
ತೊಗರಿಬೇಳೆ ಚಿಕ್ಕ ಲೋಟ
ಈರುಳ್ಳಿ 1
ಬೆಳ್ಳುಳ್ಳಿ 6 ಎಸಳು
ಸಾಸಿವೆ
ಒಣಮೆಣಸಿನಕಾಯಿ 2
ಎಣ್ಣೆ 2 ಚಮಚ
ಉಪ್ಪು

ಮಾಡುವ ವಿಧಾನ:
1 ತರಕಾರಿಗಳನ್ನು ಹಚ್ಚಿಕೊಳ್ಳಿ ಈರುಳ್ಳಿ, ಟೊಮೋಟವನ್ನು ಹಚ್ಚಿಕೊಳ್ಳಿ.
2 ಒಂದು ಕುಕ್ಕರ್‌ಗೆ ಬೀನ್ಸ್, ಕ್ಯಾರೆಟ್, ಈರುಳ್ಳಿ, ಟೊಮೋಟ, ತೊಗರಿಬೇಳೆ, ಉಪ್ಪು, ನೀರು, ಸಾಂಬಾರ್ ಪುಡಿ ಹಾಕಿ 3 ವಿಷಲ್ ಕೂಗಿಸಿ.
3 ಒಂದು ಪಾತ್ರೆಗೆ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಹಾಕಿದರೆ ಸಾಂಬಾರ್ ರೆಡಿ.

ಬೇಕಾಗುವ ಸಾಮಗ್ರಿಗಳು:
ಮೊಳಕೆ ಕಟ್ಟಿದ ಉರುಳಿಕಾಳು
ಈರುಳ್ಳಿ 1
ಟಮೋಟ 2
ಬದನೆಕಾಯಿ 2
ತೆಂಗಿನತುರಿ ಸ್ವಲ್ಪ
ಉರಿಕಡಲೆ ಸ್ವಲ್ಪ
ಸಾಂಬಾರ್ ಪುಡಿ 3 ಚಮಚ
ಉಜೆಳ್ಳು ಸ್ವಲ್ಪ
ಸಾಸಿವೆ
ಜೀರಿಗೆ
ಒಣಮೆಣಸಿನಕಾಯಿ
ಕರಿಬೇವು
ಎಣ್ಣೆ

ಉಪ್ಪು

ಮಾಡುವ ವಿಧಾನ:
1. ಈರುಳ್ಳಿ, ಟಮೋಟ, ಬದನೆಕಾಯಿಯನ್ನು ಹಚ್ಚಿಕೊಳ್ಳಿ.
2. ಒಂದು ಬಾಣಲೆಯಲ್ಲಿ ಉಜ್ಜೆಲ್ಳು ಹಾಕಿ ಬಿಸಿ ಮಾಡಿ. ಉಜ್ಜೆಲ್ಳು, ತೆಂಗಿನತುರಿ, ಉರಿಗಡಲೆ ಹಾಕಿ ರುಬ್ಬಿಕೊಳ್ಳಿ.
3. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಈರುಳ್ಳಿ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಮೊಳಕೆ ಕಾಳು, ಬದನೆಕಾಯಿ, ಟಮೋಟ ಹಾಕಿ ಮಿಕ್ಸ್ ಮಾಡಿ ನಂತರ ಅದಕ್ಕೆ ನೀರು ಹಾಕಿ ಬಿಸಿಯಾದ ಮೇಲೆ ಸಾಂಬಾರ್ ಪುಡಿ ಹಾಕಿ ಬೇಯಿಸಿಕೊಳ್ಳಿ. ಬೆಂದ ಮೇಲೆ ರುಬ್ಬಿದ ಮಿಸ್ರಣ ಮತ್ತು ಉಪ್ಪು ಸೇರಿಸಿ ಕುದಿಸಿದರೆ ಸಾಂಬಾರ್ ರೆಡಿ.

ಬೇಕಾಗುವ ಸಾಮಗ್ರಿಗಳು:
ಬಜ್ಜಿ ಮೆಣಸಿನಕಾಯಿ 5
ಕ್ಯಾರೆಟ್ 1
ಈರುಳ್ಳಿ 1
ಕಡಲೆ ಹಿಟ್ಟು 1 ಲೋಟ
ಕೊತ್ತಂಬರಿಸೊಪ್ಪು ಸ್ವಲ್ಪ
ನಿಂಬೆ ರಸ ಸ್ವಲ್ಪ
ಸೋಡಾ ಸ್ವಲ್ಪ
ಎಣ್ಣೆ
ಉಪ್ಪು
ಅಕ್ಕಿಹಿಟ್ಟು 2 ಚಮಚ
ಗರಂ ಮಸಾಲಾ ಸ್ವಲ್ಪ
ಜೀರಿಗೆ ಸ್ವಲ್ಪ
ಮಾಡುವ ವಿಧಾನ:
1. ಈರುಳ್ಳಿ, ಮೆಣಸಿನಕಾಯಿ ಕೊತ್ತಂಬರಿಸೊಪ್ಪು ಹಚ್ಚಿಕೊಳ್ಳಿ, ಕ್ಯಾರೆಟನ್ನು ತುರಿದುಕೊಳ್ಳಿ.
2. ಕಡಲೆ ಹಿಟ್ಟು, ಜೀರಿಗೆ, ಗರಂ ಮಸಾಲಾ, ಸೋಡಾ, ಅಕ್ಕಿಹಿಟ್ಟು, ಉಪ್ಪು, ನೀರು ಹಾಕಿ ಕಲಸಿಕೊಳ್ಳಿ. 3. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ ಕಲಸಿದ ಹಿಟ್ತನಲ್ಲಿ ಮೆಣಸಿನಕಾಯಿ ಹದ್ಡಿಎಣ್ಣೆಯಲ್ಲಿ ಕರಿದರೆ ಬಚ್ಚಿ ರೆಡಿ. ಮೆಣಸಿನಕಾಯಿಯನ್ನು ಕತ್ತರಿಸಿ ಅದರಲ್ಲಿ ಕ್ಯಾರೆಟ್, ಈರುಳ್ಳಿ, ನಿಂಬೆ ರಸ ಹಾಕಿದರೆ ರೆಡಿ.

ಬೇಕಾಗುವ ಸಾಮಾಗ್ರಿಗಳು:
ಅವಲಕ್ಕಿ 1 ಲೋಟ
ಎಣ್ಣೆ 3 ಚಮಚ
ಸಾಸಿವೆ 1 ಚಮಚ
ಜೀರಿಗೆ 1ಚಮಚ
ಕಡಲೆಬೇಳೆ 1 ಚಮಚ
ಉದ್ದಿನಬೇಳೆ 1 ಚಮಚ
ಕಡಲೆಬೀಜ 1 ಚಮಚ
ಈರುಳ್ಳಿ 1
ಕರಿಬೇವಿನಸೊಪ್ಪು 7-8
ಪುಳಿಯೋಗರೇಪುಡಿ 2 ಚಮಚ
ಉಪ್ಪು ರುಚಿಗೆ
ಕೊತ್ತಂಬರಿಸೊಪ್ಪು ಸ್ವಲ್ಪ

ಮಾಡುವ ವಿಧಾನ:
1. ಅವಲಕ್ಕಿಯನ್ನು 10 ನಿಮಿಷ ನೆನೆಸಿ.
2. ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಕಡಲೆಬೀಜ ಹಾಕಿ ಬಾಡಿಸಿ. ಅದಕ್ಕೆ ಈರುಳ್ಳಿ, ಕರಿಬೇವಿನಸೊಪ್ಪು ಹಾಕಿ ಅದು ಕಂದು ಬಣ್ಣ ಬರುವ ವರೆಗೆ ಬಾಡಿಸಿ. ನಂತರ ಪುಳಿಯೋಗರೆಪುಡಿ, ಉಪ್ಪು ಹಾಕಿ ಬಡಿಸಿದ ಮೇಲೆ ಅದಕ್ಕೆ ನೆನೆಸಿದ ಅವಲಕ್ಕಿ ಹಾಕಿ ಹಸಿವಾಸನೆ ಹೋಗುವ ವರೆಗೆ ಬಡಿಸಿ ನಂತರ ಕೊತ್ತಂಬರಿಸೊಪ್ಪು ಹಾಕಿದರೆ ಅವಲಕ್ಕಿ ಪುಳಿಯೋಗರೆ ರೆಡಿ.

ಬೇಕಾಗುವ ಸಾಮಾಗ್ರಿಗಳು:
ಅವಲಕ್ಕಿ 1 ಲೋಟ
ಸಕ್ಕರೆ 5 ಚಮಚ
ತೆಂಗಿನತುರಿ ಸ್ವಲ್ಪ
ಎಲ್ಲಕ್ಕಿ 2
ದ್ರಾಕ್ಸಿ 7-8
ಗೋಡಂಬಿ 4-5

ಮಾಡುವ ವಿಧಾನ:
1. ಅವಲಕ್ಕಿಯನ್ನು 10 ನಿಮಿಷ ನೆನೆಸಿ.
2. ತೆಂಗಿನತುರಿ, ಸಕ್ಕರೆ, ನೆನೆಸಿದ ಅವಲಕ್ಕಿ, ಎಲ್ಲಕ್ಕಿ ಪುಡಿ ಹಾಕಿ ಅದಕ್ಕೆ ದ್ರಾಕ್ಸಿ, ಗೋಡಂಬಿ ಹಾಕಿ ಕಲಸಿದರೆ ಅವಲಕ್ಕಿ ಸ್ವೀಟ್ ರೆಡಿ.

ಬೇಕಾಗುವ ಸಾಮಗ್ರಿಗಳು:
ಕಡ್ಲೆಪುರಿ 1 ಲೋಟ
ಕಡಲೆಹಿಟ್ಟು 1/2 ಲೋಟ
ಈರುಳ್ಳಿ 2
ಅಕ್ಕಿಹಿಟ್ಟು 2 ಚಮಚ
ಎಣ್ಣೆ ಕರಿಯಲು
ಕೊತ್ತಂಬರಿಸೊಪ್ಪು ಸ್ವಲ್ಪ
ಸಬ್ಬಕ್ಕಿಸೊಪ್ಪು ಸ್ವಲ್ಪ
ಚಿಲ್ಲಿ ಪುಡಿ 1 ಚಮಚ
ಗರಂ ಮಸಾಲ 1/2 ಚಮಚ
ಅಡುಗೆ ಸೋಡಾ ಸ್ವಲ್ಪ
ಜೀರಿಗೆ 1/2 ಚಮಚ

ಮಾಡುವ ವಿಧಾನ:
1. ಈರುಳ್ಳಿ, ಕೋತಂಬರಿಸೊಪ್ಪು, ಸಬ್ಬಕ್ಕಿಸೊಪ್ಪುನ್ನು ಹಚ್ಚಿಕೊಳ್ಳಿ.
2. ಕಡಲೆಹಿಟ್ಟು, ಈರುಳ್ಳಿ, ಕಡ್ಲೆಪುರಿ, ಚಿಲಿ ಪುಡಿ, ಜೀರಿಗೆ, ಗರಂ ಮಸಾಲಾ, ಕೊತ್ತಂಬರಿಸೊಪ್ಪು, ಸಬ್ಬಕ್ಕಿಸೊಪ್ಪು, ಸೋಡಾ, ಅಕ್ಕಿಹಿಟ್ಟು ಸ್ವಲ್ಪ ನೀರು ಹಾಕಿ ವಡೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
3. ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ವಡೆಯ ಆಕಾರದಲ್ಲಿ ಮಾಡಿ ಕರಿದರೆ ಕಡ್ಲೆ ಪುರಿ ವಡೆ ರೆಡಿ.

Kadlebele Vade
Kadlebele Vade

ಬೇಕಾಗುವ ಸಾಮಗ್ರಿಗಳು:
ಕಡ್ಲೆಬೇಳೆ 1 ಲೋಟ
ಈರುಳ್ಳಿ 2
ತೆಂಗಿನತುರಿ ಸ್ವಲ್ಪ
ಬೆಳ್ಳುಳ್ಳಿ 6-7 ಎಸಳು
ಶುಂಠಿ ಸ್ವಲ್ಪ
ಹಸಿಮೆಣಸಿನಕಾಯಿ 2-3
ಒಣಮೆಣಸಿನಕಾಯಿ 2-3
ಎಣ್ಣೆ ಕರಿಯಲು
ಕೊತ್ತಂಬರಿಸೊಪ್ಪು ಸ್ವಲ್ಪ
ಸಬ್ಬಕ್ಕಿಸೊಪ್ಪು ಸ್ವಲ್ಪ
ಅಡುಗೆ ಸೋಡಾ ಸ್ವಲ್ಪ
ಜೀರಿಗೆ 1/2 ಚಮಚ

ಮಾಡುವ ವಿಧಾನ:
1. ಕಡ್ಲೆಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ.
2. ಕಡ್ಲೆಬೇಳೆ, ಶುಂಠಿ, ಬೆಳ್ಳುಳ್ಳಿ, ತೆಂಗಿನತುರಿ, ಒಣಮೆಣಸಿನಕಾಯಿ, ಜೀರಿಗೆ ಹಾಕಿತರಿತರಿಯಾಗಿ ರುಬ್ಬಿಕೊಳ್ಳಿ.
2. ಈರುಳ್ಳಿ, ಹಸಿಮೆಣಸಿನಕಾಯಿ, ಕೋತಂಬರಿಸೊಪ್ಪು, ಸಬ್ಬಕ್ಕಿಸೊಪ್ಪುನ್ನು ಹಚ್ಚಿಕೊಳ್ಳಿ.
3. ರುಬ್ಬಿದ ಮಿಸ್ರಣಕ್ಕೆ ಈರುಳ್ಳಿ, ಕೊತ್ತಂಬರಿಸೊಪ್ಪು, ಸಬ್ಬಕ್ಕಿಸೊಪ್ಪು, ಹಸಿಮೆಣಸಿನಕಾಯಿ, ಸೋಡಾ ನೀರು ಹಾಕಿ ವಡೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
4. ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ವಡೆಯ ಆಕಾರದಲ್ಲಿ ಮಾಡಿ ಕರಿದರೆ ಕಡ್ಲೆಬೇಳೆ ವಡೆ ರೆಡಿ.

ಬೇಕಾಗುವ ಸಾಮಗ್ರಿಗಳು:

ದೋಸೆ ಹಿಟ್ಟು
ಮೆಂತ್ಯ ಸೊಪ್ಪು ಸ್ವಲ್ಪ
ತೆಂಗಿನಕಾಯಿ ತುರಿ ಸ್ವಲ್ಪ
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 4-5
ಎಣ್ಣೆ
ಉಪ್ಪು

ಮಾಡುವ ವಿಧಾನ:
1. ಮೆಂತ್ಯಸೊಪ್ಪು, ಶುಂಠಿ, ಬೆಳ್ಳುಳ್ಳಿ, ತೆಂಗಿನಕಾಯಿ ತುರಿ ರುಬ್ಬಿಕೊಂಡು ದೋಸೆ ಹಿಟ್ಟಿನ ಜೊತೆ ಬೆರೆಸಿ.
2. ಕಾದ ತವದ ಮೇಲೆ ಎಣ್ಣೆ ಸವರಿ ದೋಸೆಯನ್ನು ಹಾಕಿ ಎರಡು ಕಡೆ ಬೇಯಿಸಿದರೆ ದೋಸೆ ತಿನ್ನಲು ರೆಡಿ ಮಾಡಲು ಸುಲಭ.

ಬೇಕಾಗುವ ಸಾಮಗ್ರಿಗಳು:
ಮೆಂತ್ಯಸೊಪ್ಪು 1 ಬೌಲ್
ಬೀನ್ಸ್ 8
ಕ್ಯಾರೆಟ್ 1
ಬಟಾಣಿ ಸ್ವಲ್ಪ
ಈರುಳ್ಳಿ 1
ಟೊಮೋಟ 2
ಚಕ್ಕೆ 1
ಲವಂಗ 4
ಎಲ್ಲಕ್ಕಿ 2
ಪಲಾವ್ ಎಲೆ 2
ಮೊಗ್ಗು 2
ಚಿಲ್ಲಿ 1 ಚಮಚ
ಕೊತ್ತಂಬರಿ 2ಚಮಚ
ಗರಂ ಮಸಾಲಾ 1 ಚಮಚ
ಎಣ್ಣೆ 4 ಚಮಚ
ತೆಂಗಿನತುರಿ ಸ್ವಲ್ಪ
ಶುಂಠಿ ಸ್ವಲ್ಪ
ಬೆಳ್ಳುಳ್ಳಿ 6 ಎಸಳು
ಅಕ್ಕಿ 3 ಲೋಟ
ಸಾಸಿವೆ
ಕರಿಬೇವು
ಕೊತ್ತಂಬರಿಸೊಪ್ಪು
ಉಪ್ಪು

ಮಾಡುವ ವಿಧಾನ:
1 ತರಕಾರಿಗಳನ್ನು ಹಚ್ಚಿಕೊಳ್ಳಿ.
2 ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿ, ಮೆಂತ್ಯಸೊಪ್ಪು, ಟೊಮೋಟವನ್ನು ರುಬ್ಬಿಕೊಳ್ಳಿ.
3 ಒಂದು ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಚಕ್ಕೆ, ಲವಂಗ, ಮೊಗ್ಗು, ಪಲಾವ್ ಎಲೆ, ಏಲ್ಲಕ್ಕಿ,ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ ಆಮೇಲೆ ರುಬ್ಬಿದ ಮಿಶ್ರಣ, ಹಚ್ಚಿದ ತರಕಾರಿಗಳನ್ನು ಹಾಕಿ ಬಾಡಿಸಿ ಅದಕ್ಕೆ ಅಕ್ಕಿ ಸೇರಿಸಿ ಬಾಡಿಸಿ 1:2 ಪ್ರಕಾರ ನೀರು ಹಾಕಿ ಅದಕ್ಕೆ ಚಿಲ್ಲಿ, ಧನಿಯಾಪುಡಿ, ಗರಂ ಮಸಾಲಾ, ಉಪ್ಪು ಸೇರಿಸಿ ಕೂಡಿ ಬಂದ ನಂತರ ಮುಚ್ಚಳ ಮುಚ್ಚಿ 3 ವಿಷಲ್ ಕೂಗಿಸಿ ತಣ್ಣಗಾದ ನಂತರ ಕೊತ್ತಂಬರಿಸೊಪ್ಪು ಹಾಕಿದರೆ ಸಿದ್ದವಾಗುವುದು.

Avalakki Oggarane
Avalakki Oggarane

ಬೇಕಾಗುವ ಸಾಮಗ್ರಿಗಳು:
ಅವಲಕ್ಕಿ
ಕಡಲೆಬೀಜ 2 ಚಮಚ
ಉರಿಕಡಲೆ 2 ಚಮಚ
ಮೆಣಸಿನಪುಡಿ 1 ಚಮಚ
ಕರಿಬೇವು ಸ್ವಲ್ಪ
ಎಣ್ಣೆ
ಉಪ್ಪು
ಮಾಡುವ ವಿಧಾನ:
1. ಕಡಲೆಬೀಜ, ಉರಿಕಡಲೆಯನ್ನು ಬಿಸಿಮಾಡಿಕೊಳ್ಳಿ.
2. ಎಣ್ಣೆ ಬಿಸಿಯಾದ ಮೇಲೆ ಅವಲಕ್ಕಿಯನ್ನು ಹಾಕಿ ಕರಿಯಿರಿ. ಕರಿಬೇವನ್ನು ಕರಿಯಿರಿ ಅದಕ್ಕೆ ಕಡಲೆಬೀಜ, ಉರಿಕಡಲೆ, ಮೆಣಸಿನಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರೆಡಿ.

Appala
Appala

ಬೇಕಾಗುವ ಸಾಮಗ್ರಿಗಳು:
ಅಕ್ಕಿ ಅಪ್ಪಳ
ಎಣ್ಣೆ

ಮಾಡುವ ವಿಧಾನ:
1. ಎಣ್ಣೆ ಬಿಸಿ ಮಾಡಿ ಅದಕ್ಕೆ ಅಪ್ಪಳ ಹಾಕಿ ಕರಿದರೆ ಅಪ್ಪಳ ತಿನ್ನಲು ಸಿದ್ದ.

ಬೇಕಾಗುವ ಸಾಮಗ್ರಿಗಳು:
ಬೀನ್ಸ್ 8-10
ಕ್ಯಾರೆಟ್ 1
ಹೆಸರು ಕಾಳು 1/2 ಕಪ್
ಉಪ್ಪು
ಎಣ್ಣೆ
ಕರಿಬೇವು
ಹಸಿಮೆಣಸಿನಕಾಯಿ 2-3
ಈರುಳ್ಳಿ 1
ಸಾಸಿವೆ
ಜೀರಿಗೆ
ಕೊತ್ತಂಬರಿಸೊಪ್ಪು ಸ್ವಲ್ಪ

ಮಾಡುವ ವಿಧಾನ:
1. ಕ್ಯಾರೆಟ್, ಬೀನ್ಸ್, ಈರುಳ್ಳಿ, ಹಸಿಮೆಣಸಿನಕಾಯಿ ಹಚ್ಚಿಕೊಳ್ಳಿ.
2. ಕುಕರ್ ನಲ್ಲಿ ಹಚ್ಚಿದ ಕ್ಯಾರೆಟ್, ಬೀನ್ಸ್, ಹೆಸರುಕಾಳು ಹಾಕಿ 3 ವಿಸಲ್ ಕೂಗಿಸಿ.
3. ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಬೇಯಿಸಿದ ಮಿಸ್ರಣ ಹಾಕಿ ಉಪ್ಪು ಹಾಕಿ. ಕೊತ್ತಂಬರಿಸೊಪ್ಪು ಹಾಕಿದರೆ ಪಲ್ಯ ರೆಡಿ.

ಬೇಕಾಗುವ ಸಾಮಗ್ರಿಗಳು:
ಎಲೆಕೋಸು 1
ಕಡಲೆಬೇಳೆ 2 ಚಮಚ
ಉಪ್ಪು
ಎಣ್ಣೆ
ಕರಿಬೇವು
ಹಸಿಮೆಣಸಿನಕಾಯಿ 2-3
ಈರುಳ್ಳಿ 1
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಸಾಸಿವೆ
ಜೀರಿಗೆ
ಕೊತ್ತಂಬರಿಸೊಪ್ಪು ಸ್ವಲ್ಪ

ಮಾಡುವ ವಿಧಾನ:
1. ಎಲೆಕೋಸು, ಈರುಳ್ಳಿ, ಹಸಿಮೆಣಸಿನಕಾಯಿ ಹಚ್ಚಿಕೊಳ್ಳಿ.
2. ಸಾಸಿವೆ, ಜೀರಿಗೆ, ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ ಕೋಸು ಬೇಯುವ ವರೆಗೆ ಬಾಡಿಸಿ ಅದಕ್ಕೆಉಪ್ಪು ಮತ್ತು ಕೊತ್ತಂಬರಿಸೊಪ್ಪು ಹಾಕಿದರೆ ಪಲ್ಯ ರೆಡಿ.

ಶೇಂಗಾ ಕಡುಬು:
ಶೇಂಗಾ 1/2 ಕಪ್
ತೆಂಗಿನತುರಿ 1/2 ಕಪ್
ಎಳ್ಳು 2 ಚಮಚ
ಗಸಗಸೆ 2 ಚಮಚ
ಬೆಲ್ಲ 1/2 ಕಪ್
ಅಕ್ಕಿ ಹಿಟ್ಟು 1 ಕಪ್
ಉಪ್ಪು ರುಚಿಗೆ
ತುಪ್ಪ 3 ಚಮಚ
ಎಣ್ಣೆ 1 ಚಮಚ

ಮಾಡುವ ವಿಧಾನ:
1. ಉರಿದ ಕಡಲೆಬೀಜವನ್ನು ಪುಡಿ ಮಾಡಿಕೊಳ್ಳಿ.
2. ಎಳ್ಳು, ಗಸಗಸೆಯನ್ನ್ ಉರಿದುಕೊಳ್ಳಿ.
3. ಕಡಲೆಬೀಜ, ಎಳ್ಳು, ಗಸಗಸೆ, ಬೆಲ್ಲ, ತೆಂಗಿನತುರಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
4. ಒಂದು ಪಾತ್ರೆಗೆ ನೀರು ಹಾಕಿ ಕುದಿಸಿ. ಕಾದ ನಂತರ ಅದಕ್ಕೆ ಉಪ್ಪು, ಎಣ್ಣೆ ಹಾಕಿ. ಆಮೇಲೆ ಅಕ್ಕಿ ಹಿಟ್ಟನ್ನು ಹಾಕಿ ಮುದ್ದೆ ಮಾಡಿಕೊಳ್ಳಿ.
5. ಮುದ್ದೆಯನ್ನು ಚಿಕ್ಕ ಉಂಡೆ ಮಾಡಿಕೊಳ್ಳಿ, ಒಂದು ಕವರ್ ಮೇಲೆ ಸ್ವಲ್ಪ ತುಪ್ಪ ಸವರಿ ಉಂಡೆಯನ್ನು ಲಟ್ಟಿಸಿ ಅದಕ್ಕೆ ಮಿಸ್ರಣ ಹಾಕಿ ಸುತ್ತಲು ಮುಚ್ಚಿದರೆ ಕಡಬು ರೆಡಿ. ಬೇಗದವರು ಹಬೆಯಲ್ಲಿ 10 ನಿಮಿಷ ಬೇಯಿಸಿ. ತಿನ್ನಲು ರುಚಿಯಾದ ಶೇಂಗಾ ಕಡುಬು ರೆಡಿ.

ಸಿಹಿ ಕಡುಬು:
ಉರಿಗಡಲೆ 1/2 ಕಪ್
ತೆಂಗಿನತುರಿ 1/2 ಕಪ್
ಎಳ್ಳು 2 ಚಮಚ
ಗಸಗಸೆ 2 ಚಮಚ
ಬೆಲ್ಲ 1/2 ಕಪ್
ಅಕ್ಕಿ ಹಿಟ್ಟು 1 ಕಪ್
ಉಪ್ಪು ರುಚಿಗೆ
ತುಪ್ಪ 3 ಚಮಚ
ಎಣ್ಣೆ 1 ಚಮಚ

ಮಾಡುವ ವಿಧಾನ:
1. ಉರಿಗಡಲೆಯನ್ನು ಪುಡಿ ಮಾಡಿಕೊಳ್ಳಿ.
2. ಎಳ್ಳು, ಗಸಗಸೆಯನ್ನ್ ಉರಿದುಕೊಳ್ಳಿ.
3. ಉರಿಗಡಲೆ, ಎಳ್ಳು, ಗಸಗಸೆ, ಬೆಲ್ಲ, ತೆಂಗಿನತುರಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
4. ಒಂದು ಪಾತ್ರೆಗೆ ನೀರು ಹಾಕಿ ಕುದಿಸಿ. ಕಾದ ನಂತರ ಅದಕ್ಕೆ ಉಪ್ಪು, ಎಣ್ಣೆ ಹಾಕಿ. ಆಮೇಲೆ ಅಕ್ಕಿ ಹಿಟ್ಟನ್ನು ಹಾಕಿ ಮುದ್ದೆ ಮಾಡಿಕೊಳ್ಳಿ.
5. ಮುದ್ದೆಯನ್ನು ಚಿಕ್ಕ ಉಂಡೆ ಮಾಡಿಕೊಳ್ಳಿ, ಒಂದು ಕವರ್ ಮೇಲೆ ಸ್ವಲ್ಪ ತುಪ್ಪ ಸವರಿ ಉಂಡೆಯನ್ನು ಲಟ್ಟಿಸಿ ಅದಕ್ಕೆ ಮಿಸ್ರಣ ಹಾಕಿ ಸುತ್ತಲು ಮುಚ್ಚಿದರೆ ಕಡಬು ರೆಡಿ. ಬೇಗದವರು ಹಬೆಯಲ್ಲಿ 10 ನಿಮಿಷ ಬೇಯಿಸಿ. ತಿನ್ನಲು ರುಚಿಯಾದ ಸಿಹಿ ಕಡುಬು ರೆಡಿ.

ಶೇಂಗಾ ಉಂಡೆ ಅಧವಾ ಲಡ್ಡು:
ಶೇಂಗಾ 1/2 ಕಪ್
ತೆಂಗಿನತುರಿ 1/2 ಕಪ್
ಎಳ್ಳು 2 ಚಮಚ
ಗಸಗಸೆ 2 ಚಮಚ
ಬೆಲ್ಲ 1/2 ಕಪ್
ತುಪ್ಪ 3 ಚಮಚ

ಮಾಡುವ ವಿಧಾನ:
1. ಉರಿದ ಕಡಲೆಬೀಜವನ್ನು ಪುಡಿ ಮಾಡಿಕೊಳ್ಳಿ.
2. ಎಳ್ಳು, ಗಸಗಸೆಯನ್ನ್ ಉರಿದುಕೊಳ್ಳಿ.
3. ಕಡಲೆಬೀಜ, ಎಳ್ಳು, ಗಸಗಸೆ, ಬೆಲ್ಲ, ತೆಂಗಿನತುರಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
4. ಚಿಕ್ಕ ಚಿಕ್ಕ ಉಂಡೆ ಮಾಡಿದರೆ ಶೇಂಗಾ ಉಂಡೆ ರೆಡಿ.

ಕರ್ಚಿಕಾಯಿ:
ಶೇಂಗಾ 1/2 ಕಪ್
ಉರಿಕಡಲೆ 1/2 ಕಪ್
ಕೊಬ್ಬರಿ ತುರಿ 1/2 ಕಪ್
ಎಳ್ಳು 2 ಚಮಚ
ಗಸಗಸೆ 2 ಚಮಚ
ಬೆಲ್ಲ 1/2 ಕಪ್
ಮೈದಾ ಹಿಟ್ಟು 1 ಕಪ್
ಉಪ್ಪು ರುಚಿಗೆ
ತುಪ್ಪ 3 ಚಮಚ
ಎಣ್ಣೆ 1 ಚಮಚ

ಮಾಡುವ ವಿಧಾನ:
1. ಉರಿದ ಕಡಲೆಬೀಜ, ಉರಿಕಡಲೆಯನ್ನು ಪುಡಿ ಮಾಡಿಕೊಳ್ಳಿ.
2. ಎಳ್ಳು, ಗಸಗಸೆಯನ್ನ್ ಉರಿದುಕೊಳ್ಳಿ.
3. ಕಡಲೆಬೀಜ, ಉರಿಕಡಲೆ, ಎಳ್ಳು, ಗಸಗಸೆ, ಬೆಲ್ಲ, ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
4. ಮೈದವನ್ನು ನೀರು, ಉಪ್ಪು ಹಾಕಿ ಹಿಟ್ಟನ್ನು ಸಿದ್ದಮಾಡಿಕೊಳ್ಳಿ.
5. ಚಿಕ್ಕ ಉಂಡೆ ಮಾಡಿ ಪುರಿ ತರ ಲಟ್ಟಿಸಿಕೊಳ್ಳಿ.
6. ಲಟ್ಟಿಸಿದಕ್ಕೆ ಪುಡಿ ಹಾಕಿ ಮುಚ್ಚಿಕೊಳ್ಳಿ.
7 ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಕರ್ಜಿಕಾಯಿಯನ್ನು ಹಾಕಿ ಬೇಯಿಸಿದರೆ ರುಚಿಯಾದ ಕರ್ಜಿಕಾಯಿ ಸಿದ್ದ.

TAGS:

everyday cooking recipes,everyday cookbook,everyday italian recipes,everyday dorie recipes,everyday dorie cookbook,minimalist baker’s everyday cooking,everyday instant pot cookbook,giada everyday italian,minimalist baker everyday cooking,the laura lea balanced cookbook,easy everyday cooking,amy chaplin whole food cooking every day,love and lemons everyday cookbook,everyday italian cookbook,marguerite patten everyday cookbook,everyday food cookbook,everyday vegan cookbook,mary berry everyday cookbook,rick bayless mexican everyday,carla hall’s soul food cookbook,everyday slow cooker recipes,carla hall soul food cookbook recipes,whole food cooking every day amy chaplin,great american recipes easy everyday cooking,best everyday cookbook,everyday meals to cook,everyday meals cookbook,giada everyday italian cookbook,mary berry everyday cooking,katie chin recipes,easy everyday cooking recipes,rick bayless everyday mexican recipes,everyday cooking martha stewart,whole food cooking everyday amy chaplin,healthy cooking everyday,best cookbook for everyday meals,mr food test kitchen everyday diabetic recipes,everyday italian cooking channel,instant pot everyday recipes,simple everyday cookbook,everyday chinese cooking,everyday slow cooking,best everyday vegetarian cookbook

Leave a comment